ಭದ್ರತಾ ವೈಫಲ್ಯ: ಪೋಸ್ಟರ್ ಹಿಡಿದು ಸಿಎಂ–ರಾಜ್ಯಪಾಲರತ್ತ ನುಗ್ಗಿದ ಯುವಕ

26/01/2024
ಬೆಂಗಳೂರು: 75ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಿಎಂ ಸಿದ್ದರಾಮಯ್ಯನವರ ಬಳಿಗೆ ವ್ಯಕ್ತಿಯೋರ್ವ ಕರಪತ್ರ ಹಿಡಿದು ಒಳನುಗ್ಗಿದ ಘಟನೆ ನಡೆದಿದೆ.
ಮಾಣಿಕ್ ಷಾ ಪರೇಡ್ ಗ್ರೌಂಡ್ ನಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಸ್ಟೇಜ್ ಮುಂದಿನಿಂದ ಗ್ರೌಂಡ್ ಒಳಗೆ ಓಡಿ ಬಂದಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಂದೆ ನಿಂತು ಪೋಸ್ಟರ್ ಪ್ರದರ್ಶಿಸಿದ್ದಾನೆ.
ಇದೇ ವೇಳೆ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದು, ಕಬ್ಬನ್ ಪಾರ್ಕ್ ಠಾಣೆಗೆ ಕರೆದೊಯ್ಯಲಾಗಿದೆ. ಪೋಸ್ಟರ್ ಪ್ರದರ್ಶನದ ವೇಳೆ ವ್ಯಕ್ತಿ ಕಣ್ಣೀರು ಹಾಕಿರೋದು ಕಂಡು ಬಂದಿದೆ.