ಇಬ್ಬರು ಮಾವೋವಾದಿಗಳನ್ನು ಎನ್ ಕೌಂಟರ್ ನಡೆಸಿದ ಭದ್ರತಾ ಪಡೆಗಳು! - Mahanayaka

ಇಬ್ಬರು ಮಾವೋವಾದಿಗಳನ್ನು ಎನ್ ಕೌಂಟರ್ ನಡೆಸಿದ ಭದ್ರತಾ ಪಡೆಗಳು!

madya pradesh
02/04/2024


Provided by

ಬಾಲಾಘಾಟ್: ಭದ್ರತಾ ಪಡೆಗಳು ಎನ್ ಕೌಂಟರ್ ನಡೆಸಿ ಇಬ್ಬರು ಮಾವೋವಾದಿಗಳನ್ನು ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಲಾಂಜಿಯಲ್ಲಿ ನಡೆದಿದೆ.

ಮಾವೋವಾದಿ ನಾಯಕ ಡಿವಿಸಿಎಂ ಸಜಂತಿ (38) ಹಾಗೂ ಮತ್ತು ಬಾಲಾಘಾಟ್ನ ರಘು ಅಲಿಯಾಸ್ ಶೇರ್ ಸಿಂಗ್ (54) ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ ಮಾವೋವಾದಿಗಳಾಗಿದ್ದಾರೆ. ಈ ಇಬ್ಬರು ಮಾವೋವಾದಿಗಳ ತಲೆಗೆ 43 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಮೃತ ಮಾವೋವಾದಿಗಳಿಂದ ಒಂದು ಎಕೆ 47, ಮ್ಯಾಗಜೀನ್, 12 ಬೋರ್ ರೈಫಲ್, ಬಾಫೆಂಗ್ ವಾಕಿ ಟಾಕಿ ಸೆಟ್ ಮತ್ತು ಒಂದು ಪ್ರಿಂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.

ಮಧ್ಯಪ್ರದೇಶ ಮತ್ತು ಛತ್ತೀಸ್ಗಢದ ಗಡಿಯಲ್ಲಿರುವ ಕೆರಾಜರಿ ಅರಣ್ಯದಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಹಾಕ್ ಫೋರ್ಸ್ ಮತ್ತು ಮಾವೋವಾದಿಗಳ ನಡುವೆ ಸಂಘರ್ಷ ನಡೆದಿದೆ ಎಂದು ಬಾಲಾಘಾಟ್ ಪೊಲೀಸ್ ಉಪ ನಿರೀಕ್ಷಕ (ಡಿಐಜಿ) ಮುಖೇಶ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಸುಮಾರು ಮೂರು ಗಂಟೆಗಳ ನಂತರ, ಎರಡು ಮೃತದೇಹಗಳನ್ನು ಕಾಡಿನಿಂದ ಹೊರತೆಗೆಯಲಾಯಿತು ಎಂದು ಅವರು ತಿಳಿಸಿದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ