ಕಟೌಟ್ ಬದಲಿಸುತ್ತಿದ್ದ ಸಂದರ್ಭದಲ್ಲಿ ದುರಂತ | ಸೆಕ್ಯುರಿಟಿ ಗಾರ್ಡ್ ದಾರುಣ ಸಾವು - Mahanayaka

ಕಟೌಟ್ ಬದಲಿಸುತ್ತಿದ್ದ ಸಂದರ್ಭದಲ್ಲಿ ದುರಂತ | ಸೆಕ್ಯುರಿಟಿ ಗಾರ್ಡ್ ದಾರುಣ ಸಾವು

06/12/2020


Provided by

ಬೆಂಗಳೂರು: ಸಿನಿಮಾ ಕಟೌಟ್ ಬದಲಿಸುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರೋರ್ವರು ಕಾಲು ಜಾರಿ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ನಡೆದಿದೆ.

ಮೃತರು ರಾಜು ಸೆಕ್ಯುರಿಟಿ ಏಜೆನ್ಸಿಗೆ ಸೇರಿದವರು ಎಂದು ಹೇಳಲಾಗಿದೆ. ಆದರೆ ಅವರ ಹೆಸರು ಇನ್ನೂ ತಿಳಿದು ಬಂದಿಲ್ಲ. ಹೊಸ ಸಿನಿಮಾ ಬರುವ ಹಿನ್ನೆಲೆಯಲ್ಲಿ  ಹಳೆಯ ಕಟೌಟ್ ಬದಲಾಯಿಸುತ್ತಿದ್ದ ಸಂದರ್ಭದಲ್ಲಿ  ಕಾಲು ಜಾರಿ ಬಿದ್ದು ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಚಿತ್ರಮಂದಿರಕ್ಕೆ ಸಂಬಂಧಪಟ್ಟವರು ಯಾರೂ ಸ್ಥಳದಲ್ಲಿರಲಿಲ್ಲ. ಪಾದಚಾರಿಗಳು ಸೆಕ್ಯುರಿಟಿ ಗಾರ್ಡ್ ನ್ನು ಗಮನಿಸಿ ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವವಾದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಸೆಕ್ಯುರಿಟಿ ಗಾರ್ಡ್ ಗೆ ಒಬ್ಬನಿಗೇ ಕಟೌಟ್ ಬದಲಿಸಲು ಹೇಳಿದವರು ಯಾರು? ಈ ಘಟನೆಗೆ ಯಾರ ನಿರ್ಲಕ್ಷ್ಯ ಕಾರಣ ಎಂಬ ಬಗ್ಗೆ ಇನ್ನು ತನಿಖೆಯಾಗಬೇಕು ಎಂದು ಘಟನಾ ಸ್ಥಳಕ್ಕೆ ಆಗಮಿಸಿದ್ದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

ಇತ್ತೀಚಿನ ಸುದ್ದಿ