ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೆ ಮಹಿಳೆಗೆ ಹಲ್ಲೆ ಮಾಡಿದ್ದ ಓಲಾ ಆಟೋ ಚಾಲಕನ ಸ್ಥಿತಿ ಈಗ ಏನಾಗಿದೆ ನೋಡಿ ! - Mahanayaka
10:17 AM Tuesday 14 - October 2025

ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೆ ಮಹಿಳೆಗೆ ಹಲ್ಲೆ ಮಾಡಿದ್ದ ಓಲಾ ಆಟೋ ಚಾಲಕನ ಸ್ಥಿತಿ ಈಗ ಏನಾಗಿದೆ ನೋಡಿ !

auto ola
09/09/2024

ಬೆಂಗಳೂರು: ಆಟೋ ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ ಆಟೋ ಚಾಲಕನಿಗೆ ಕೋರ್ಟ್ ನಾಲ್ಕು ದಿನಗಳ  ಕಾರಾಗೃಹ ಶಿಕ್ಷೆ ವಿಧಿಸಿದೆ.


Provided by

ಇದಲ್ಲದೇ ಲಾಯರ್ ಖರ್ಚು ಮತ್ತು ಜಾಮೀನು ಅರ್ಜಿ ಸಲ್ಲಿಸಲು 30 ಸಾವಿರ ರೂಪಾಯಿವರೆಗೆ ಇದೀಗ ಆಟೋ ಚಾಲಕ ಖರ್ಚು ಮಾಡಲೇ ಬೇಕಿದೆ.

ಮಹಿಳಾ ಪ್ರಯಾಣಿಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಲ್ಲೆ ನಡೆಸಿರುವ 46 ವರ್ಷದ ಆಟೋ ಡ್ರೈವರ್ ಆರ್.ಮುತ್ತುರಾಜ್ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 74 ಮತ್ತು 352ರ ಅಡಿಯಲ್ಲಿ ದೂರು ದಾಖಲಾಗಿದೆ.

ಈ ಘಟನೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಮಹಿಳೆಯೊಬ್ಬರು  ರೈಡ್ ಕ್ಯಾನ್ಸಲ್ ಮಾಡಿದ್ದರಿಂದ ಸಿಟ್ಟಿಗೆದ್ದಿದ್ದ ಆಟೋ ಚಾಲಕ ಆಕೆ ಪ್ರಯಾಣಿಸುತ್ತಿದ್ದ ಬೇರೊಂದು ಆಟೋವನ್ನು ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅಲ್ಲದೇ ಆಕೆಯ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ದೈಹಿಕ ಹಲ್ಲೆ ನಡೆಸಿದ್ದ ಎಂದು ಮಹಿಳೆ ಆರೋಪಿಸಿದ್ದರು. ಆಟೋ ಚಾಲಕನ ನಡವಳಿಕೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ತನ್ನ ಕೃತ್ಯಕ್ಕೆ ಸಮಾಜಾಯಿಸಿ ನೀಡಲು ಆರೋಪಿ ವಿಫಲನಾಗಿದ್ದಾಗಿದ್ದಾನೆ. ಹೀಗಾಗಿ ಆತನ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ