ಡ್ಯಾಂ ಬಳಿ ಗ್ರೂಪ್ ಸೆಲ್ಫಿ ತೆಗೆಯುತ್ತಿದ್ದ ವೇಳೆ ನೀರಿಗೆ ಬಿದ್ದರು | ಮೃತಪಟ್ಟವರೆಷ್ಟು ಮಂದಿ ಗೊತ್ತಾ? - Mahanayaka
10:53 PM Wednesday 15 - October 2025

ಡ್ಯಾಂ ಬಳಿ ಗ್ರೂಪ್ ಸೆಲ್ಫಿ ತೆಗೆಯುತ್ತಿದ್ದ ವೇಳೆ ನೀರಿಗೆ ಬಿದ್ದರು | ಮೃತಪಟ್ಟವರೆಷ್ಟು ಮಂದಿ ಗೊತ್ತಾ?

group selfie
18/04/2021

ಪುಣೆ:  ಗ್ರೂಪ್ ಸೆಲ್ಫಿ ತೆಗೆಯಲು ಡ್ಯಾಂ ಬಳಿ ಹೋದವರು ವಾಪಸ್ ಬರಲೇ ಇಲ್ಲ. ಹೌದು…! ಒಬ್ಬರಿಬ್ಬರಲ್ಲ  ಬರೊಬ್ಬರಿ 6 ಜನರು ಹುಟ್ಟು ಹಬ್ಬದ ಪ್ರಯುಕ್ತ ಸೆಲ್ಫಿ ತೆಗೆಯಲು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ವಲ್ದೇವಿ ಡ್ಯಾಮ್ ಬಳಿ ತೆರಳಿದ್ದು, ಆರು ಜನರು ಕೂಡ ನೀರಿಗೆ ಬಿದ್ದು ಸಾವಿಗೀಡಾಗಿದ್ದಾರೆ.


Provided by

ಸೋನಿ ಗೇಮ್(12), ಋಷಿ ಮಣಿಯಾರ್ (10), ಜ್ಯೋತಿ ಗೇಮ್(16), ಹಿಮ್ಮತ್ ಚೌಧರಿ (16), ನಾಜಿಯಾ ಮಣಿಯಾರ್ (19) ಮತ್ತು ಆರತಿ ಭಲೇರಾವ್ (22) ಮೃತಪಟ್ಟವರಾಗಿದ್ದಾರೆ. ಸೋನಿ ಗೇಮ್ ಹುಟ್ಟುಹಬ್ಬ ಆಚರಣೆಗೆ ತೆರಳಿದ್ದರು. ಫೋಟೋ ಕ್ಲಿಕ್ಕಿಸುವ ವೇಳೆ ಆಯತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಸೋನಿಗೇಮ್ ನ ಹುಟ್ಟುಹಬ್ಬದ ಆಚರಣೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಮೂವರನ್ನು ರಕ್ಷಿಸಲಾಗಿದೆ. ಉಳಿದ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ