ಗಂಭೀರವಾಗಿ ಗಾಯಗೊಂಡಿದ್ದ ಮರಿ ಆನೆ ಚಿಕಿತ್ಸೆ ಫಲಕಾರಿಯಾಗದೇ ಸಾವು - Mahanayaka
8:20 PM Thursday 6 - November 2025

ಗಂಭೀರವಾಗಿ ಗಾಯಗೊಂಡಿದ್ದ ಮರಿ ಆನೆ ಚಿಕಿತ್ಸೆ ಫಲಕಾರಿಯಾಗದೇ ಸಾವು

elepant
28/08/2023

ಚಾಮರಾಜನಗರ: ತಲೆಗೆ ಗಂಭೀರ ಏಟು ಬಿದ್ದು ಗಾಯಗೊಂಡಿದ್ದ ಮರಿಯಾನೆಯೊಂದು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ ಘಟನೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ಅರಣ್ಯದ ಹೊನ್ನೆಮರದ ತಿಟ್ಟಿನಲ್ಲಿ ನಡೆದಿದೆ.

ಸುಮಾರು 3ರಿಂದ ನಾಲ್ಕು ವರ್ಷದ ಗಂಡಾನೆ ತಲೆಗೆ ಏಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ನಾಲ್ಕು ದಿನಗಳ ಹಿಂದೆ ನಿತ್ರಾಣಗೊಂಡು ನಿಂತಿತ್ತು.

ಗಾಯಾಳು ಆನೆಗೆ ಕಬ್ಬು, ಬಾಳೆ, ಜೋಳ ಕೊಟ್ಟು ಅರಣ್ಯ ಇಲಾಖೆ ಆರೈಕೆ ಮಾಡಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಆನೆ ಮರಿ ಸಾವನ್ನಪ್ಪಿದೆ. ಆನೆ ಸಾವನ್ನಪ್ಪಿದ ಹಿನ್ನೆಲೆ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

 

ಇತ್ತೀಚಿನ ಸುದ್ದಿ