ರ‍್ಯಾಪಿಡೋ ಬೈಕ್‌ ಸವಾರನಿಂದ ಲೈಂಗಿಕ ಕಿರುಕುಳ - Mahanayaka

ರ‍್ಯಾಪಿಡೋ ಬೈಕ್‌ ಸವಾರನಿಂದ ಲೈಂಗಿಕ ಕಿರುಕುಳ

rapido
26/04/2023


Provided by

ಬೆಂಗಳೂರು: ರ‍್ಯಾಪಿಡೋ ಬೈಕ್‌ ಸವಾರನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಚಲಿಸುತ್ತಿದ್ದ ಬೈಕ್‌ನಿಂದಲೇ ಜಿಗಿದಿರುವ ಘಟನೆ ಯಲಹಂಕದ ಹೊರವಲಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಚರ್ ಆಗಿ ಕೆಲಸ ಮಾಡ್ತಿದ್ದ ಯುವತಿ ಇದೇ ತಿಂಗಳ ಏಪ್ರಿಲ್‌ 21 ರಂದು ಯಲಹಂಕದಿಂದ ಇಂದಿರಾನಗರಕ್ಕೆ ತೆರಳಲು ರ‍್ಯಾಪಿಡೋ ಬುಕ್‌ ಮಾಡಿದ್ದಾಳೆ. ಬೈಕ್‌ ಸವಾರ ಓಟಿಪಿ ಪಡೆಯುವ ನೆಪದಲ್ಲಿ ಮೊಬೈಲ್‌ ಕಸಿದಿದ್ದಾನೆ. ಬಳಿಕ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಚಲಿಸುತ್ತಿದ್ದ ಬೈಕ್‌ನಿಂದ ಜಿಗಿದಿದ್ದಾಳೆ

ಬೆಂಗಳೂರಿನ ಯಲಹಂಕ ಉಪನಗರ ನಾಗೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ