ಸೋದರಳಿಯ ಅಜಿತ್ ಪವಾರ್ ಮೇಲೆ ಶರದ್ ಪವಾರ್ ಮೊದಲ ಮಾತಿನ ದಾಳಿ: ನೀರಾವರಿ ಹಗರಣದಲ್ಲಿ ಭಾಗಿಯಾದವರು ಎನ್ ಡಿಎ ಸೇರಿದ್ರು ಎಂದ ಶರದ್..! - Mahanayaka

ಸೋದರಳಿಯ ಅಜಿತ್ ಪವಾರ್ ಮೇಲೆ ಶರದ್ ಪವಾರ್ ಮೊದಲ ಮಾತಿನ ದಾಳಿ: ನೀರಾವರಿ ಹಗರಣದಲ್ಲಿ ಭಾಗಿಯಾದವರು ಎನ್ ಡಿಎ ಸೇರಿದ್ರು ಎಂದ ಶರದ್..!

02/07/2023


Provided by

ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ಸೋದರಳಿಯ ಅಜಿತ್ ಪವಾರ್ ಅವರು ಶಿವಸೇನೆ (ಶಿಂಧೆ) -ಬಿಜೆಪಿ ಸರ್ಕಾರಕ್ಕೆ ಸೇರುವುದರೊಂದಿಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಉಂಟಾಗಿರುವ ಆಘಾತಕ್ಕೆ ಬಲವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಶರದ್ ಪವಾರ್ ಎಚ್ಚರಿಕೆ ನೀಡಿದರು. ಅಜಿತ್ ಪವಾರ್‌ ಹಾಗೂ ಹಸನ್ ಮುಶ್ರಿಫ್ ಹೆಸರು ನೀರಾವರಿ ಹಗರಣದಲ್ಲಿ ಕೇಳಿಬಂದಿದ್ದು ಇದೀಗ ಈ ಆರೋಪಿಗಳು ಎನ್ ಡಿಎ ಸರ್ಕಾರವನ್ನು ಸೇರಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಪರಿಸ್ಥಿತಿ ನನಗೆ ಹೊಸದೇನಲ್ಲ. 58 ಶಾಸಕರ ಪೈಕಿ ಇದ್ದಾಗ ಈ ಘಟನೆ ಈ ಹಿಂದೆಯೂ ಇದು ಸಂಭವಿಸಿತ್ತು. ನನ್ನೊಂದಿಗೆ ಕೇವಲ 5 ಜನರು ಮಾತ್ರ ಉಳಿದಿದ್ದರು. ಆವಾಗ ನಾನು ದೃತಿಗೆಡದೇ ಪಕ್ಷದ ಸಂಖ್ಯೆಯನ್ನು ಬಲಪಡಿಸಿದೆ. ನನ್ನನ್ನು ತೊರೆದವರು ತಮ್ಮ ಕ್ಷೇತ್ರಗಳಲ್ಲೇ ಸೋತರು. ಇನ್ಮುಂದೆ ‌ನಾನು ಯುವಕರು ಮತ್ತು ಸಾಮಾನ್ಯ ಜನರ ಸಹಾಯದಿಂದ ತಮ್ಮ ಪಕ್ಷವನ್ನು ಪುನರ್ ನಿರ್ಮಿಸುವುದಾಗಿ ಹೇಳಿದರು.

ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ಸೇರಿದಂತೆ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿ ಸರ್ಕಾರವು ನಮ್ಮ ಕೆಲವು ಸಹೋದ್ಯೋಗಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದೆ. ಈಗ ಅವರೇ ಅವರ ಸರ್ಕಾರವನ್ನು ಸೇರಿದ್ದಾರೆ ಎಂದು ಪವಾರ್ ಹೇಳಿದರು.

ಏತನ್ಮಧ್ಯೆ, ಮುಂಬೈನ ಪಕ್ಷದ ಪ್ರಧಾನ ಕಚೇರಿಯಲ್ಲಿ ಎನ್ ಸಿಪಿ ಕಾರ್ಯಕರ್ತರು ಎನ್ ಡಿಎ ಸರ್ಕಾರಕ್ಕೆ ಸೇರಿದವರ ಮುಖಕ್ಕೆ ಕಪ್ಪು ಶಾಯಿ ಹಾಕಿದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಮಧ್ಯೆ ಶರದ್ ಪವಾರ್ ಅವರು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ