ಶಶಿಕಲಾ ನಟರಾಜನ್ ಗೆ ಶ್ವಾಸಕೋಶದಲ್ಲಿ ಸೋಂಕು | ಅವರ ಸ್ಥಿತಿ ಈಗ ಏನಾಗಿದೆ ಗೊತ್ತಾ? - Mahanayaka
4:12 AM Thursday 4 - December 2025

ಶಶಿಕಲಾ ನಟರಾಜನ್ ಗೆ ಶ್ವಾಸಕೋಶದಲ್ಲಿ ಸೋಂಕು | ಅವರ ಸ್ಥಿತಿ ಈಗ ಏನಾಗಿದೆ ಗೊತ್ತಾ?

21/01/2021

ಬೆಂಗಳೂರು:  ನಾಲ್ಕು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ  ಶಶಿಕಲಾ ನಟರಾಜನ್ ಅವರ ಆರೋಗ್ಯದಲ್ಲಿ ನಿನ್ನೆ ಏರುಪೇರಾಗಿತ್ತು. ಇದೀಗ ಅವರ ಆರೋಗ್ಯದ ವಿಚಾರವಾಗಿ ವರದಿಗಳು ಬಂದಿದ್ದು, ಅವರಿಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ವೈದ್ಯರು ಶಶಿಕಲಾ ಅವರನ್ನು ಆರ್ ಟಿಪಿಸಿಆರ್ ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಈ ವೇಳೆ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಅವರನ್ನು ಐಸಿಯುಗೆ ದಾಖಲು ಮಾಡಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿದು ಬಂದಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಕೆ ಶಶಿಕಲಾಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುನಲ್ಲಿ ಆಮ್ಲಜನಕದ ವ್ಯವಸ್ಥೆ ಅಳವಡಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಬೌರಿಂಗ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ