ಶೃಂಗೇರಿ ಶಿಕ್ಷಣಾಧಿಕಾರಿ ಕೊರೊನಾಕ್ಕೆ ಬಲಿ - Mahanayaka

ಶೃಂಗೇರಿ ಶಿಕ್ಷಣಾಧಿಕಾರಿ ಕೊರೊನಾಕ್ಕೆ ಬಲಿ

nagaraj
12/05/2021


Provided by

ಚಿಕ್ಕಮಗಳೂರು:  ಕೊವಿಡ್ 19 ಸೋಂಕಿನಿಂದ ಬಳಲುತ್ತಿದ್ದ ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ನಾಗರಾಜ್ ಅವರು ಇಂದು ನಿಧನರಾಗಿದ್ದು, ಕಳೆದ ಕೆಲವು ದಿನಗಳಿಂದ ಅವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು.

51 ವರ್ಷ ವಯಸ್ಸಿನ ಡಾ.ನಾಗರಾಜ್ ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಕೊವಿಡ್ ಸೋಂಕು ದೃಢಗೊಂಡ ಬಳಿಕ ನಾಗರಾಜ್ ಅವರು ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನ್ನಪ್ಪಿದ್ದಾರೆ.

ಇತ್ತೀಚಿನ ಸುದ್ದಿ