ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ: ಡಿಜಿಪಿ ಸ್ಪಷ್ಟನೆ - Mahanayaka
6:46 PM Wednesday 15 - October 2025

ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ: ಡಿಜಿಪಿ ಸ್ಪಷ್ಟನೆ

harsha
22/02/2022

ಬೆಂಗಳೂರು: ವಿದೇಶಿ ಪತ್ರಕರ್ತನೊಬ್ಬ ಶಿವಮೊಗ್ಗದಲ್ಲಿ ಕೊಲೆಯಾಗಿರುವ ಹಿಂದೂ ಕಾರ್ಯಕರ್ತನನ್ನು ಟೆರರಿಸ್ಟ್ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟಣೆ ನೀಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.


Provided by

ಸಿಜೆ ವಾರ್ಲೆನ್ ಎಂಬಾತ ತನ್ನ ಟ್ವಿಟ್ಟರ್ ಖಾತೆಯಲ್ಲಿ, ನವೆಂಬರ್ ತಿಂಗಳಲ್ಲಿ ತ್ರಿಪುರಾದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಿರುವ ಹಿಂದೂ ಉಗ್ರಗಾಮಿ ಸಂಘಟನೆಯಾಗಿರುವ ಭಜರಂಗದಳಕ್ಕೆ ಸೇರಿದ ಭಯೋತ್ಪಾದಕನನ್ನು ಭಾನುವಾರ ರಾತ್ರಿ ಕೊಲ್ಲಲಾಗಿದೆ ಎಂದು ಬರೆದುಕೊಂಡಿದ್ದನು.

ಈ ಟ್ವೀಟ್‌ಗೆ ಡಿಜಿಪಿ ಪ್ರವೀಣ್ ಸೂದ್ ಪ್ರತಿಕ್ರಿಯಿಸಿ, ಇದು ಸಂಪೂರ್ಣವಾಗಿ ಸುಳ್ಳು ಸುದ್ದಿಯಾಗಿದೆ. ಹತ್ಯೆಯಾದ ವ್ಯಕ್ತಿಗೆ ಭಯೋತ್ಪಾದನೆ ಅಥವಾ ತ್ರಿಪುರ ಹಿಂಸಾಚಾರದೊಂದಿಗೆ ಯಾವುದೇ ಸಂಬಂಧವಿಲ್ಲ. ಈ ವ್ಯಕ್ತಿಯ ಸಾವಿಗೂ, ಭಯೋತ್ಪಾದನೆಗೂ ಹಾಗೂ ತ್ರಿಪುರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸುವ ಮೂಲಕ ವಾರ್ಲೆನ್ ಆರೋಪವನ್ನು ಡಿಜಿಪಿ ನಿರಾಕರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ

ಪ್ರತಿ ಹತ್ಯೆಗೆ ಸಿದ್ದರಾಮಯ್ಯಗೆ ಬೈಯ್ಯುತ್ತಿದ್ದೆವು, ಈಗ ನಾಚಿಕೆಯಾಗುತ್ತಿದೆ | ಪ್ರತಾಪ್ ಸಿಂಹ ಹೇಳಿದ್ದೇನು?

ಸಂಬಂಧಿಕರ ಮುಂದೆಯೇ ಸಿಪಿಎಂ ಕಾರ್ಯಕರ್ತನ ಭೀಕರ ಕೊಲೆ

ಮೃತ ಹರ್ಷನ ವಿರುದ್ದ ನಾಲ್ಕು ಪ್ರಕರಣ ದಾಖಲಾಗಿದ್ದವು

ಇತ್ತೀಚಿನ ಸುದ್ದಿ