ಶಿರೂರು ಗುಡ್ಡ ಕುಸಿತ ಪ್ರಕರಣ: ಇನ್ನೂ ಸಿಗದ ಈ ಮೂವರ ಸುಳಿವು | ಮಿಲಿಟರಿ ತಂಡದ ಕಾರ್ಯಾಚರಣೆ ಆರಂಭ

ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿರುವ ಮೂವರ ಮೃತದೇಹಗಳಿಗಾಗಿ ಶೋಧ ನಡೆಯುತ್ತಿದ್ದು, ಘಟನೆ ನಡೆದು 7 ದಿನಗಳು ಕಳೆದರೂ ಇನ್ನೂ ಕಾರ್ಯಾಚರಣೆ ಪೂರ್ಣಗೊಂಡಿಲ್ಲ.
ಸಣ್ಣಿ ಗೌಡ, ಅರ್ಜುನ್ ಹಾಗೂ ಜಗನ್ನಾಥ್ ಎಂಬವರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾದ ಹಿನ್ನೆಲೆ ಮೃತ ದೇಹಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ರಸ್ತೆ ಪಕ್ಕ ಇದ್ದ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜಗನ್ನಾಥ್, ಸಣ್ಣಿ ಗೌಡ ಹಾಗೂ ಕೇರಳದ ಟಿಂಬರ್ ಲಾರಿ ಚಾಲಕ ಅರ್ಜನ್ ಲಾರಿಯೊಂದಿಗೆ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಇವರು ಇನ್ನೂ ಬದುಕಿರುವ ಶಂಕೆಯ ಹಿನ್ನೆಲೆಯಲ್ಲಿ ಇದೀಗ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಸದ್ಯ ಸ್ಥಳಕ್ಕೆ ಮಿಲಿಟರಿ ತಂಡ ಆಗಮಿಸಿದ್ದು, 40 ಜನರ ಮಿಲಿಟರಿ ತಂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಲಾರಿ ಮಣ್ಣಿನಡಿಯಲ್ಲಿ ಇದೆಯೇ ಅಥವಾ ನದಿಗೆ ಕೊಚ್ಚಿ ಹೋಗಿದೆ ಎನ್ನುವ ಎರಡು ಶಂಕೆಗಳೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸದ್ಯದ ಮಾಹಿತಿಗಳ ಪ್ರಕಾರ 2 ಸ್ಥಳಗಳಲ್ಲಿ ರಾಡರ್ ಮೂಲಕ ಗುರುತು ಪತ್ತೆ ಹಚ್ಚಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಸ್ಥಳದಲ್ಲಿ ಕೇರಳದ ಅರ್ಜನ್ ಇದ್ದ ಟಿಂಬರ್ ಲಾರಿ ಸಿಲುಕಿರುವ ಸಾಧ್ಯತೆಗಳಿವೆ ಎನ್ನುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97