ನಟ ಶಿವರಾಜ್ ಕುಮಾರ್ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ: ಅಷ್ಟಕ್ಕೂ ನಡೆದದ್ದೇನು?
ಮೈಸೂರು: ನಟ ಶಿವರಾಜ್ ಕುಮಾರ್(Shivaraj Kumar) ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಸುದ್ದಿಗಳ ಹಿನ್ನೆಲೆಯಲ್ಲಿ ಶಕ್ತಿಧಾಮದ ಖಜಾಂಚಿ ಸುಮನಾ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದಿದ್ದಾರೆ.
ನಟ ಶಿವರಾಜ್ ಕುಮಾರ್ ಅವರು ಆರೋಗ್ಯ ತಪಾಸಣೆಗೊಳಗಾಗಿರುವುದು ನಿಜ. ಆದರೆ ಅವರ ಆರೋಗ್ಯದಲ್ಲಿ ಏರುಪೇರಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಶಿವರಾಜ್ ಕುಮಾರ್ ಅವರು ಜೆಎಸ್ ಎಸ್ ಆಸ್ಪತ್ರೆಯಲ್ಲಿ ಬುಧವಾರ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಏರುಪೇರಾಗಿಲ್ಲ. ಬೆಳಗ್ಗಿನಿಂದ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿತ್ತು.
ಸಾಮಾನ್ಯ ಆರೋಗ್ಯ ತಪಾಸಣೆಯ ಬಳಿಕ ಶಿವರಾಜ್ ಕುಮಾರ್ ಅವರು ಶಕ್ತಿಧಾಮ(Shakthidhama)ಕ್ಕೆ ವಾಪಸ್ ಬಂದು ಮಕ್ಕಳೊಂದಿಗೆ ಕಾಲಕಳೆದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯಡಿಯೂರಪ್ಪರಿಂದ ಬೆಳೆದ ಯತ್ನಾಳ್, ಅವರ ವಿರುದ್ಧವೇ ಕತ್ತಿಮಸೆಯುತ್ತಿದ್ದಾರೆ: ದಿಂಗಾಲೇಶ್ವರ ಶ್ರೀ ತಿರುಗೇಟು
ಬಸ್ಸಿನ ಕಿಟಕಿ ತೆರೆಯುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಚಾಲಕನ ಬಂಧನ
ವೀಕ್ಷಕರ ನಿರೀಕ್ಷೆ ಸುಳ್ಳಾಗಿಸಿದ ಕೆಜಿಎಫ್ ಚಾಪ್ಟರ್ 2: ನೆಗೆಟಿವ್ ವಿಮರ್ಶೆ
ಚಿತ್ರೀಕರಣಕ್ಕೆ ನಿರ್ಮಿಸಿದ ಮನೆಯನ್ನು ಮೀನುಗಾರರಿಗೆ ನೀಡಲು ಮುಂದಾದ ನಟ ಸೂರ್ಯ




























