ಶಿವರಾಜ್ ಕುಮಾರ್ ಅವರಿಗೆ 6 ಆಪರೇಷನ್, 190 ಹೊಲಿಗೆ ಹಾಕಲಾಗಿದೆ: ಸಚಿವ ಮಧುಬಂಗಾರಪ್ಪ - Mahanayaka

ಶಿವರಾಜ್ ಕುಮಾರ್ ಅವರಿಗೆ 6 ಆಪರೇಷನ್, 190 ಹೊಲಿಗೆ ಹಾಕಲಾಗಿದೆ: ಸಚಿವ ಮಧುಬಂಗಾರಪ್ಪ

shivaraj kumar
15/01/2025


Provided by

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರಿಗೆ 6 ಆಪರೇಷನ್ ಮಾಡಲಾಗಿದ್ದು, 190 ಹೊಲಿಗೆಗಳನ್ನು ಹಾಕಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದೂವರೆ ಗಂಟೆಗಳ ಆಪರೇಷನ್ ಪ್ಲಾನ್ ಮಾಡಲಾಗಿತ್ತು. ಆದರೆ, ನಾಲ್ಕೂ ಮುಕ್ಕಾಲು ಗಂಟೆಗೆ ಆಪರೇಷನ್ ಮುಗಿಯಿತು. ಮ್ಯಾನ್ಯುವಲಿ ಮಾಡಬೇಕಾ? ಅಥವಾ ರೋಬೋಟಿಕ್ ಮಾಡಬೇಕಾ ಅಂತ ಎರಡು ಪ್ರಕಾರದಲ್ಲಿ ಚರ್ಚೆ ಮಾಡಲಾಯ್ತು. ಕೊನೆಗೆ ಮ್ಯಾನ್ಯುವಲ್ ಮಾಡುವುದು ಸೂಕ್ತ ಎನ್ನುವ ನಿರ್ಧಾರ ಮಾಡಲಾಯಿತು ಎಂದು ಅವರು ಹೇಳಿದರು.

ಶಿವರಾಜ್ ಕುಮಾರ್ ಅವರಿಗೆ 63 ವಯಸ್ಸಾಗಿದ್ದು, ಅವರು ವಾಪಸ್ ಬಂದ ಮೇಲೆ 36ರ ಹಾಗೆ ಕಾಣುತ್ತಾರೆ. ವೈದ್ಯರು ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮಧುಬಂಗಾರಪ್ಪ ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

 

ಇತ್ತೀಚಿನ ಸುದ್ದಿ