ಗೋಬ್ಯಾಕ್ ಶೋಭಕ್ಕ ಅಭಿಯಾನ ವಿರುದ್ಧ ಸಿಟ್ಟು, ಆಕ್ರೋಶ ಹೊರಹಾಕಿದ ಶೋಭಾ ಕರಂದ್ಲಾಜೆ - Mahanayaka

ಗೋಬ್ಯಾಕ್ ಶೋಭಕ್ಕ ಅಭಿಯಾನ ವಿರುದ್ಧ ಸಿಟ್ಟು, ಆಕ್ರೋಶ ಹೊರಹಾಕಿದ ಶೋಭಾ ಕರಂದ್ಲಾಜೆ

shobha karandlaje
26/02/2024

ಚಿಕ್ಕಮಗಳೂರು: ಪತ್ರ ಅಭಿಯಾನ, ಗೋಬ್ಯಾಕ್ ಶೋಭಕ್ಕ ವಿರುದ್ಧ ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಸಿಟ್ಟು, ಆಕ್ರೋಶ ಹೊರಹಾಕಿದರು.

ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಎಂಬ ಭಾವನೆ ಇದೆ, ಈ ದರ್ಪದಿಂದಲೇ ಕೆಲವರು ಮಾಡುತ್ತಿದ್ದಾರೆ, ಮಾಡಿಸುತ್ತಿದ್ದಾರೆ. ವ್ಯವಸ್ಥಿತವಾಗಿ ದುಡ್ಡಿನ ಮದ ಅಹಂಕಾರದಿಂದ ಈ ರೀತಿ ಮಾಡ್ತಿದ್ದಾರೆ, ಷಡ್ಯಂತ್ರಕ್ಕೆ ಉತ್ತರ ನಾನು ಕೊಡಲ್ಲ, ನಮ್ಮ ನಾಯಕರು, ದೊಡ್ಡವರು ಕೊಡ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಯಾರು ಬರೆದರೂ, ಬರೆಸಿದವರು ಯಾರು, ಯಾವ ಹ್ಯಾಂಡ್ ರೈಟಿಂಗ್ ಬರೆದರು ಎಲ್ಲಾ ಗೊತ್ತಿದೆ.  ನನ್ನ ಹಿರಿಯರ ಮೇಲೆ ನಂಬಿಕೆ ಇದೆ, ಅವರು ಉತ್ತರ ನೀಡುತ್ತಾರೆ.  ಕೇಂದ್ರ ಕೂಡ ಎಲ್ಲಾ ವರದಿ ತರಿಸಿಕೊಂಡಿದೆ ಎಂದು ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು.

ಎಂ.ಬಿ.ಪಾಟೀಲ್ ಗೆ ಶೋಭಾ ತಿರುಗೇಟು:

ಶೋಭಾ ಮೊದ್ಲು ಟಿಕೆಟ್ ಉಳಿಸಿಕೊಳ್ಳಲಿ ಎಂದ ಎಂ.ಬಿ.ಪಾಟೀಲ್ ಗೆ  ಇದೇ ವೇಳೆ ಶೋಭಾ ತಿರುಗೇಟು ನೀಡಿದ ಶೋಭಾ ಕರಂದ್ಲಾಜೆ,  ಸಿಎಂ–ಡಿಸಿಎಂ ಮಧ್ಯೆ ಏನು ನಡೀತಿದೆ ಅನ್ನೋದು ಚುನಾವಣೆ ಬಳಿಕ ಹೊರಬರಲಿದೆ, ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ ಅನ್ನೋದು ಅವರಿಗೆ ಗೊತ್ತಿದೆ ಎಂದರು.

ಕಾಂಗ್ರೆಸ್ಸಿಗೆ ಅವರ ಎಂ.ಎಲ್.ಎ. ಉಳಿಸಿಕೊಳ್ಳಲು ಆಗಲ್ಲ ಅಂತ ಬಿಜೆಪಿ ಶಾಸಕರಿಗೆ ಕೈ ಹಾಕಿದೆ.  ಚುನಾವಣೆ ಬಳಿಕ ಎಲ್ಲವೂ ಹೊರಬರಲಿದೆ ಎಂದು ಶೋಭಾ ತಿರುಗೇಟು ನೀಡಿದರು.

ಇತ್ತೀಚಿನ ಸುದ್ದಿ