ಪಂಪ್ ಶೆಡ್ ನಲ್ಲಿ ಮೊಬೈಲ್ ಚಾರ್ಜ್ ಇಡಲು ಹೋದ ವ್ಯಕ್ತಿಯ ದುರಂತ ಸಾವು - Mahanayaka
1:29 PM Sunday 14 - September 2025

ಪಂಪ್ ಶೆಡ್ ನಲ್ಲಿ ಮೊಬೈಲ್ ಚಾರ್ಜ್ ಇಡಲು ಹೋದ ವ್ಯಕ್ತಿಯ ದುರಂತ ಸಾವು

mobile charging
16/11/2022

ಮೊಬೈಲ್ ಚಾರ್ಜ್ ಹಾಕುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಶಂಕರನಾರಾಯಣ ಗ್ರಾಮದಲ್ಲಿ ನಡೆದಿದೆ.


Provided by

ಉತ್ತರ ಪ್ರದೇಶ ರಾಜ್ಯದ ದೇವಾನಿಯ ಜಿಲ್ಲೆಯ ನಿವಾಸಿ 34 ವರ್ಷದ ವಸಿಷ್ಠ ಪಾಸ್ವಾನ್ ಮೃತದುರ್ದೈವಿ. ಇವರು ಸಂಬಂಧಿಕರಾದ  ವಿಫಿನ್  ಹಾಗೂ  ರಾಮಾನಿ ಎಂಬವರೊಂದಿಗೆ ಕೆಲಸಕ್ಕಾಗಿ ಕುಂದಾಪುರ  ತಾಲೂಕಿನ ಶಂಕರನಾರಾಯಣ ಗ್ರಾಮಕ್ಕೆ ಬಂದಿದ್ದರು. ಅಲ್ಲಿ ಕೆಲಸ  ಮಾಡಿಕೊಂಡಿದ್ದ ವಸಿಷ್ಠ ಅವರು, ನ.14ರಂದು ರಾತ್ರಿ 8 ಗಂಟೆಗೆ ಅಲ್ಲಿಯೇ ಇದ್ದ  ತೋಟದ  ಪಂಪ್ ಸೆಟ್ ಶೆಡ್ ‌‌ನಲ್ಲಿ ಮೊಬೈಲ್ ಚಾರ್ಜ್ ಹಾಕಲು ಹೋಗಿದ್ದಾರೆ.

ಈ ವೇಳೆ  ಆಕಸ್ಮಿಕವಾಗಿ ಕರೆಂಟ್  ಶಾಕ್ ಹೊಡೆದಿದ್ದು, ಕೂಡಲೇ  ಅವರನ್ನು ಕುಂದಾಪುರ  ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ವಸಿಷ್ಠ ಅವರು ಮೃತಪಟ್ಟಿದ್ಧಾರೆ ಎಂದು ತಿಳಿಸಿದ್ದಾರೆ.. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ