ಯುವತಿಯ ಖಾಸಗಿ ಚಿತ್ರ ತೋರಿಸಿ ಬ್ಲ್ಯಾಕ್ ಮೇಲ್: ಮರ್ಯಾದೆಗೆ ಅಂಜಿ ವಿಷ ಸೇವಿಸಿದ ಇಡೀ ಕುಟುಂಬ! - Mahanayaka

ಯುವತಿಯ ಖಾಸಗಿ ಚಿತ್ರ ತೋರಿಸಿ ಬ್ಲ್ಯಾಕ್ ಮೇಲ್: ಮರ್ಯಾದೆಗೆ ಅಂಜಿ ವಿಷ ಸೇವಿಸಿದ ಇಡೀ ಕುಟುಂಬ!

news
08/06/2024


Provided by

ಚಾಮರಾಜನಗರ : ಯುವತಿಯ ಖಾಸಗಿ ಫೋಟೋ, ವಿಡಿಯೋ ತೋರಿಸಿ ವ್ಯಕ್ತಿಯೊಬ್ಬ ಬ್ಲ್ಯಾಕ್ ಮೇಲ್ ಮಾಡಿದ್ದು, ಇದರಿಂದ ನೊಂದು ಯುವತಿ  ಹಾಗೂ ಆಕೆಯ ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿರುವ  ಘಟನೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

ಘಟನೆಯಲ್ಲಿ ಸಂತ್ರಸ್ತ ಯುವತಿಯ ತಂದೆ ಮಹದೇವನಾಯಕ ಎಂಬವರು ಮೃತಪಟ್ಟಿದ್ದರೆ, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಂದಗಾಲು ಗ್ರಾಮದ ಮಹದೇವನಾಯಕ ಅವರ ಪುತ್ರಿ  ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಆದರೆ ಕೆಲವು ಸಮಯದಿಂದ ಇವರ ನಡುವೆ ಬಿರುಕು ಮೂಡಿದ್ದು, ಯುವತಿ ಆತನಿಂದ ದೂರವಾಗಿದ್ದಳು.

ಇದರಿಂದ ಕೋಪಗೊಂಡ ಯುವಕ ಸಂತ್ರಸ್ತೆಯ ಖಾಸಗಿ ಫೋಟೋ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕಿದ್ದನು. ಇದರಿಂದಾಗಿ ಮರ್ಯಾದೆಗೆ ಅಂಜಿ ಕುಟುಂಬ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿತ್ತು ಎಂದು ವರದಿಯಾಗಿದೆ.

ಸದ್ಯ ಯುವತಿಯ ತಂದೆ ಮೃತಪಟ್ಟಿದ್ದರೆ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹದೇಶ್ವರರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ