ರಸ್ತೆಬದಿಯಲ್ಲಿರೊ ಎಲ್ಲಾ ನಾನ್-ವೆಜ್ ಸ್ಟಾಲ್ ಗಳನ್ನು ಮುಚ್ಚಬೇಕು: ಗೆದ್ದ ನಂತರ ರಾಜಸ್ಥಾನ ಬಿಜೆಪಿ ಶಾಸಕರ ಆವಾಜ್..! - Mahanayaka
10:01 AM Thursday 21 - August 2025

ರಸ್ತೆಬದಿಯಲ್ಲಿರೊ ಎಲ್ಲಾ ನಾನ್-ವೆಜ್ ಸ್ಟಾಲ್ ಗಳನ್ನು ಮುಚ್ಚಬೇಕು: ಗೆದ್ದ ನಂತರ ರಾಜಸ್ಥಾನ ಬಿಜೆಪಿ ಶಾಸಕರ ಆವಾಜ್..!

04/12/2023


Provided by

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಭಾವಶಾಲಿ ವಿಜಯವನ್ನು ಗಳಿಸಿದೆ.
ಜೈಪುರದ ಹವಾ ಮಹಲ್ ಸ್ಥಾನವನ್ನು ಗೆದ್ದ ಬಿಜೆಪಿಯ ಶಾಸಕ ಬಾಲಮುಕುಂದ್ ಆಚಾರ್ಯ ಅವರು ಈ ಪ್ರದೇಶದ ಬೀದಿಗಳಲ್ಲಿರುವ ಎಲ್ಲಾ ಮಾಂಸಾಹಾರಿ ಆಹಾರ ಮಳಿಗೆಗಳನ್ನು ಮುಚ್ಚಲು ಆದೇಶಿಸಿದ್ದಾರೆ.

ಮಾಂಸಾಹಾರವನ್ನು ರಸ್ತೆಯಲ್ಲಿ ಬಹಿರಂಗವಾಗಿ ಮಾರಾಟ ಮಾಡಬಹುದೇ..? ಹೌದು ಅಥವಾ ಇಲ್ಲ ಎಂದು ಉತ್ತರಿಸಿ. ರಸ್ತೆ ಬದಿಯಲ್ಲಿರುವ ಎಲ್ಲಾ ನಾನ್-ವೆಜ್ ಸ್ಟಾಲ್ ಗಳನ್ನು ತಕ್ಷಣವೇ ಮುಚ್ಚಬೇಕು. ನಾನು ಸಂಜೆ ನಿಮ್ಮಿಂದ ವರದಿಯನ್ನು ತೆಗೆದುಕೊಳ್ಳುತ್ತೇನೆ. ಅಧಿಕಾರಿ ಯಾರು ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಬಿಜೆಪಿ ಶಾಸಕರು ಹೇಳಿಕೆ ನೀಡಿದರು.

ಏತನ್ಮಧ್ಯೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಈ‌ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ಆದೇಶವನ್ನು ‘ತಪ್ಪು’ ಎಂದು ಕರೆದ ಓವೈಸಿ, “ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
ರಾಜಸ್ಥಾನದ ಹವಾ ಮಹಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಬಾಲ‌ಮುಕುಂದ್ ಆಚಾರ್ಯ ಅವರು ಕಾಂಗ್ರೆಸ್‌ನ ಆರ್.ಆರ್.ತಿವಾರಿ ಅವರನ್ನು 600 ಮತಗಳ ಅಂತರದಿಂದ ಸೋಲಿಸಿದ್ದಾರೆ.

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಕಾಂಗ್ರೆಸ್ 69 ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನದಲ್ಲಿ ಎಂಟು ಸ್ವತಂತ್ರರು ಚುನಾವಣೆಯಲ್ಲಿ ಗೆದ್ದರೆ, ಭಾರತ್ ಆದಿವಾಸಿ ಪಾರ್ಟಿ ಮೂರು ಸ್ಥಾನಗಳಲ್ಲಿ ಜಯಗಳಿಸಿದೆ. ಮಾಯಾವತಿ ಅವರ ಬಹುಜನ ಸಮಾಜ ಪಕ್ಷ (ಬಿಎಸ್ಪಿ) 2 ಸ್ಥಾನಗಳನ್ನು ಗೆದ್ದರೆ, ರಾಷ್ಟ್ರೀಯ ಲೋಕ ದಳ ಮತ್ತು ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ ತಲಾ ಒಂದು ಸ್ಥಾನಗಳನ್ನು ಗೆದ್ದಿವೆ.

ಇತ್ತೀಚಿನ ಸುದ್ದಿ