ಸಿದ್ದರಾಮಯ್ಯ ಆ್ಯಂಡ್ ಕಂಪನಿಗೆ ತಕ್ಕಪಾಠ ಕಲಿಸಿ: ಕೊಳ್ಳೇಗಾಲದಲ್ಲಿ ಯಡಿಯೂರಪ್ಪ ಗುಡುಗು - Mahanayaka
8:15 AM Wednesday 29 - October 2025

ಸಿದ್ದರಾಮಯ್ಯ ಆ್ಯಂಡ್ ಕಂಪನಿಗೆ ತಕ್ಕಪಾಠ ಕಲಿಸಿ: ಕೊಳ್ಳೇಗಾಲದಲ್ಲಿ ಯಡಿಯೂರಪ್ಪ ಗುಡುಗು

yadiyurappa
01/03/2023

ಚಾಮರಾಜನಗರ: ಜಿಲ್ಲೆಯ ಎಲ್ಲ ಬಂಧುಗಳಲ್ಲಿಯೂ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, 4 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು,  ಸಿದ್ದರಾಮಯ್ಯ ಆ್ಯಂಡ್ ಕಂಪನಿ ಹಣಬಲ, ಅಧಿಕಾರ ಬಲ, ಜಾತಿ ನಡುವೆ ವಿಷ ಬಿತ್ತಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದರು.

ನನಗೆ ಜಾತಿ ಗೊತ್ತಿಲ್ಲ, ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ಎಂದು ಬದುಕಿರುವವನು ನಾನು‌. ನರೇಂದ್ರ ಮೋದಿ ಇರುವವರೆಗೂ ಈ ವೆಂಕ, ನಾಣಿ, ಸೀನ ಇವರೆಲ್ಲಾ ಯಾವ ಲೆಕ್ಕ ಎಂದ ಅವರು, ಎನ್.ಮಹೇಶ್ ನ್ನು ಗೆಲ್ಲಿಸಿರುವುದಕ್ಕೆ ಕೃತಜ್ಞತೆಗಳನ್ನು ತಿಳಿಸಿದರು.

ಎಲ್ಲಾ ವೀರಶೈವ ಬಂಧುಗಳಿಗೂ ನನ್ನ ಪ್ರಾರ್ಥನೆ. ಯಡಿಯೂರಪ್ಪ ಚುನಾವಣೆಗೆ ನಿಲ್ಲಲ್ಲ, ಪಕ್ಷ ಅನ್ಯಾಯ ಮಾಡ್ತು ಎಂಬ ಮಾತು ಬೇಡ. ಮುಖ್ಯಮಂತ್ರಿ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡಿದ್ದು.  ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ. 15  ರಿಂದ 20 ಸಾವಿರ ಮತಗಳ ಅಂತರದಲ್ಲಿ ಜಿಲ್ಲೆಯ 4 ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಯಡಿಯೂರಪ್ಪ ಕರೆ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ