ಪಿಟಿಸಿಎಲ್ ಕಾಯ್ದೆ ತಿದ್ದುಪಡಿ: ಲಕ್ಷಾಂತರ ದಲಿತರ ಪಾಲಿಗೆ ಸಿದ್ದರಾಮಯ್ಯ ಹೊಸಬೆಳಕು: ಎಂ.ಪಿ.ಕುಮಾರ ಸ್ವಾಮಿ - Mahanayaka
12:02 PM Saturday 23 - August 2025

ಪಿಟಿಸಿಎಲ್ ಕಾಯ್ದೆ ತಿದ್ದುಪಡಿ: ಲಕ್ಷಾಂತರ ದಲಿತರ ಪಾಲಿಗೆ ಸಿದ್ದರಾಮಯ್ಯ ಹೊಸಬೆಳಕು: ಎಂ.ಪಿ.ಕುಮಾರ ಸ್ವಾಮಿ

m p kumaswamy
20/07/2023


Provided by

ದಲಿತರ ಬಹುದಿನಗಳ ಬಹುತ್ವಕಾಂಕ್ಷೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಪಾಲಿಗೆ ಹೊಸಬೆಳಕನ್ನು ಮೂಡಿಸಿದ್ದಾರೆ. ಎಂದು ಮಾಜಿ ಶಾಸಕ, ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರ ಸ್ವಾಮಿ ಹೇಳಿದರು.

ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಸಾವಿರಾರು ದಲಿತ ಜನಾಂಗದ ಜಮೀನುಗಳು ಮೋಸದ ಅಮಿಷಕ್ಕೆ ಒಳಗಾಗಿ ಕಳೆದುಕೊಂಡು ಭೂಗಳ್ಳರ ಪಾಲಾಗಿತ್ತು, ಈ ಕಾಯ್ದೆ ಯನ್ನು ಮುಖ್ಯಮಂತ್ರಿಗಳು ತಿದ್ದುಪಡಿ ತರುವ ಮೂಲಕ ಕರ್ನಾಟಕದಲ್ಲಿ ಮತ್ತೊಬ್ಬ ಅಂಬೇಡ್ಕರ್ ಉದಯಿಸಿದಂತಾಗಿದೆ.

ಮುಖ್ಯಮಂತ್ರಿಗಳು ಸರ್ಕಾರ ಬಂದು ಕೇವಲ ಎರಡು ತಿಂಗಳಲ್ಲಿ, ಮೊದಲ ಅಧಿವೇಶನದಲ್ಲೇ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ತಂದಿರುವುದು.ಬಡವರ, ದಲಿತರ ಮೇಲೆ ಇರುವ ಕಾಳಜಿ,ಬದ್ಧತೆ ಮತ್ತು ಸಮಾಜಿಕ ನ್ಯಾಯವನ್ನು ಎತ್ತಿ ತೋರಿಸುತ್ತದೆ, ಮುಂದಿನ ದಿನಗಳಲ್ಲಿ ದಲಿತರ ಮನೆ,ಮನೆಗಳಲ್ಲಿ ಸಿದ್ದರಾಮಯ್ಯ ನವರು ಸಮಾಜಿಕ ಹರಿಕಾರರಾಗಿ ವಿಜೃಂಭಿಸಲಿದ್ದಾರೆ.ಇದಕ್ಕೆ ಸಹಕರಿಸಿದ ಕಂದಾಯ ಕೃಷ್ಣ ಬೈರೇ ಗೌಡ, ಮಂತ್ರಿ ಮಂಡಲದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕಾಯ್ದೆಗಳು ಎಷ್ಟೆ ಪರಿಣಾಮಕಾರಿಯಾಗಿದ್ದರೂ ಅನುಷ್ಠಾನಗೊಳಿಸುವ ಮನಸ್ಸು ಆಸಕ್ತಿ ಮುಖ್ಯ ಎಂದು ಅಂಬೇಡ್ಕರ್ ಹೇಳಿದ್ದರು,ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ