ಸಿದ್ದರಾಮಯ್ಯ ಮುಳುಗುತ್ತಿರುವ ಹಡಗು: ಸಚಿವ ಅಂಗಾರ - Mahanayaka

ಸಿದ್ದರಾಮಯ್ಯ ಮುಳುಗುತ್ತಿರುವ ಹಡಗು: ಸಚಿವ ಅಂಗಾರ

s angara
27/01/2022


Provided by

ಉಡುಪಿ: ಮುಳುಗುವ ಹಡಗು ಸಿದ್ದರಾಮಯ್ಯ ಅವರು ಎಂದು ಮೀನುಗಾರಿಕಾ ಬಂದರು ಸಚಿವ ಎಸ್. ಅಂಗಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಲ್ಲಿ ಸ್ಪಷ್ಟತೆ ಇಲ್ಲ. ಬಿಜೆಪಿಗೆ ಸ್ಪಷ್ಟತೆ ಇದೆ. ಉದ್ದೇಶ ವಿಚಾರ ಧಾರೆ ಇದೆ. ಸಿದ್ದರಾಮಯ್ಯ ಮುಳುಗುವ ಸ್ಥಿತಿಯಲ್ಲಿ ಇದ್ದಾರೆ. ಹಾಗಾಗಿ ಎಲ್ಲರೂ ಮುಳುಗಿದಂತೆ ಕಾಣುತ್ತಿರಬಹುದು ಎಂದರು.

ಡಿ.ಕೆ. ಶಿವಕುಮಾರ್ ಸಂಪರ್ಕದಲ್ಲಿ ಬಿಜೆಪಿ ಶಾಸಕರು ಇದ್ದು, ರೆಸಾರ್ಟ್‍ನಲ್ಲಿ ಇಬ್ಬರು ಬಿಜೆಪಿಯ ನಾಯಕರು ಡಿಕೆಶಿ ಜೊತೆ ಚರ್ಚೆ ಮಾಡಿದ್ದಾರೆ ಎಂಬ ವಿಚಾರಕ್ಕೆ ಕುರಿತಂತೆ ಪ್ರತಿಕ್ರಿಯಿಸಿ, ಅಪಪ್ರಚಾರ ಏನು ಬೇಕಾದರೂ ಮಾಡಬಹುದು. ನಾಳೆ ನಾನು ಕೂಡ ಡಿಕೆಶಿ ಜೊತೆಗಿದ್ದೇನೆ ಎಂದು ಹೇಳಬಹುದು. ಅಂಗಾರ ಏನು ಎಂದು ಜನಗಳಿಗೆ ಗೊತ್ತು. ಹಾಗಾಗಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡೋದು ಬೇಡಿ. ಯತ್ನಾಳ್ ಏನಾದರೂ ಹೇಳಬಹುದು, ಅದನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂಘಟನೆಯ ವ್ಯವಸ್ಥೆಯಲ್ಲಿ ನಾವೆಲ್ಲ ಅಧಿಕಾರ ಪಡೆದಿದವರು. ನಾವು ಹೇಗೆ ನಡೆದುಕೊಳ್ಳಬೇಕು ಎಂದು ಮೊದಲು ಆಲೋಚಿಸಬೇಕು. ನಾವೇ ಅನಗತ್ಯ ವಿವಾದ ಮಾಡಿದರೆ ಹೊರ ಹೋಗಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಉಸ್ತುವಾರಿ ಹಂಚಿಕೆಯ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಅಂಗಾರ, ನಮ್ಮಲ್ಲಿ ಯಾವ ಅಸಮಾಧಾನವೂ ಇಲ್ಲ. ಎಲ್ಲವು ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು. ಉಸ್ತುವಾರಿ ಸಿಗದಿದ್ದರೂ ಚುನಾಯಿತ ಪ್ರತಿನಿಧಿಯಾಗಿ ನನ್ನ ಕೆಲಸ ನಾನು ಮಾಡಬೇಕು. ನನ್ನ ಕ್ಷೇತ್ರದ ಕೆಲಸದ ಜೊತೆ ಹೆಚ್ಚುವರಿಯಾಗಿ ಉಸ್ತುವಾರಿ ಕೆಲಸ ಮಾಡುತ್ತೇನೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಾಟ್ಸಾಪ್​ ಗ್ರೂಪ್‌ ಗೆ ಅಶ್ಲೀಲ ಫೋಟೋ ಹಾಕಿ ಪೇಚಿಗೆ ಸಿಲುಕಿದ ಬಿಜೆಪಿ ಮುಖಂಡ

ಅಂಬೇಡ್ಕರ್ ಪ್ರತಿಮೆಗೆ ಅವಮಾನ: ವಿಧಾನಸೌಧದ ಎದುರು ಸಂವಿಧಾನ ಪರ ಸಂಘಟನೆಗಳಿಂದ ಪ್ರತಿಭಟನೆ

ತುಲುನಾಡ್ ಮನ್ಸ ಸಮಾಜ ಸೇವಾ ಸಂಘದಿಂದ ಸಂವಿಧಾನ ದಿನಾಚರಣೆ

ಅನ್ಯಜಾತಿ ಹುಡುಗಿಯೊಂದಿಗೆ ಮದುವೆ: ಲೈಟ್ ಕಂಬಕ್ಕೆ ಕಟ್ಟಿ ಹುಡುಗನ ತಾಯಿ ಮೇಲೆ ಹಲ್ಲೆ

ಸಂವಿಧಾನ ದಿನವೇ ಅಂಬೇಡ್ಕರ್ ಗೆ ಅವಮಾನ ಮಾಡಿದ ನ್ಯಾಯಾಧೀಶ: ಕೋರ್ಟ್ ಆವರಣದಲ್ಲಿಯೇ ಉದ್ಧಟತನದ ವರ್ತನೆ

 

ಇತ್ತೀಚಿನ ಸುದ್ದಿ