ಸಿಕ್ಕಿ ಸಿಕ್ಕಿದವರ ಮನೆಗೆ ನುಗ್ಗಿ ಕಚ್ಚಿದ ಹುಚ್ಚುನಾಯಿ: ಒಂದು ಆಡು ಬಲಿ, ನಾಯಿ, ದನ ಕರುಗಳ ಮೇಲೆ ದಾಳಿ - Mahanayaka

ಸಿಕ್ಕಿ ಸಿಕ್ಕಿದವರ ಮನೆಗೆ ನುಗ್ಗಿ ಕಚ್ಚಿದ ಹುಚ್ಚುನಾಯಿ: ಒಂದು ಆಡು ಬಲಿ, ನಾಯಿ, ದನ ಕರುಗಳ ಮೇಲೆ ದಾಳಿ

belthangady
08/11/2022


Provided by

ಬೆಳ್ತಂಗಡಿ: ಬಳೆಂಜ ಗ್ರಾ.ಪಂ ವ್ಯಾಪ್ತಿಯ ಪೆರಾಲ್ದರಕಟ್ಟೆ  ಎಂಬಲ್ಲಿ ಹುಚ್ಚು ನಾಯಿಯೊಂದು  ಆಡಿನ ಮರಿಯೊಂದನ್ನು ಕಚ್ಚಿ ಸಾಯಿಸಿದ್ದೂ ಮಾತ್ರವಲ್ಲದೆ ಜನ ಜಾನುವಾರುಗಳನ್ನು ಕಚ್ಚಿ ಗಾಯಗೊಳಿಸಿದ ಘಟನೆ ಮಂಗಳವಾರ ನಡೆದಿದೆ.

ಪೆರಾಲ್ದರಕಟ್ಟೆಯ ಪಿ.ಕೆ ಇಂಡಸ್ಟ್ರೀಸ್ ನಲ್ಲಿ ಇಬ್ಬರು ಮಹಿಳೆಯರು ಮತ್ತು ಮಸೀದಿಯ ಬಳಿಯ ಮಹಿಳೆಯೊಬ್ಬರಿಗೆ ನಾಯಿ ಕಚ್ಚಿ ಗಾಯಗೊಳಿಸಿದೆ. ಅದು ಹೋದ ದಾರಿಯಲ್ಲಿ ಮನೆ ಮನೆಗಳಿಗೆ ನುಗ್ಗಿ ಜಾನುವಾರುಗಳ ಮೇಲೆ ದಾಳಿ ನಡೆಸಿದೆ.

ಒಂದು  ಆಡಿನ ಮರಿಯನ್ನು ಕಚ್ಚಿದ ಭರಕ್ಕೆ ಆಡು ಸ್ಥಳದಲ್ಲೇ ಸಾವನ್ನಿದೆ ಎಂದು ಸಾರ್ವಜನಿಕರು ಮಾಹಿತಿ  ನೀಡಿದ್ದಾರೆ.‌ ಮೂರು ಕರುಗಳು ಹಾಗೂ ದನಗಳನ್ನೂ ಕಚ್ಚಿದ ನಾಯಿ ಬೀದಿ ಬದಿಯ ಭಾಗಶಃ ಎಲ್ಲ ನಾಯಿಗಳ ಮೇಲೂ ಈ ಹುಚ್ಚುನಾಯಿ ದಾಳಿ ನಡೆಸಿದೆ.‌

ಬಳಿಕ ಸಾರ್ವಜನಿಕರು ಗ್ರಾ.ಪಂ. ಸದಸ್ಯ ನಿಜಾಂ‌ ಅವರ  ನೇತೃತ್ವದಲ್ಲಿ ಹುಚ್ಚು ನಾಯಿಯನ್ನು ಬೆನ್ನತ್ತಿ ಹೊಡೆದು ಸಾಯಿಸಿದ್ದಾರೆ.   ಆ ನಾಯಿ ಇನ್ನಷ್ಟು ಅಪಾಯ ಸೃಷ್ಡಿಸುವ ಸಾಧ್ಯತೆ‌ ಇತ್ತು. ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ