ಧ್ರುವ ಹುಟ್ಟೂರಲ್ಲಿ ನೀರವ ಮೌನ: ಸಕಲ ಸಿದ್ಧತೆ, ತಂದೆ-ತಾಯಿ ಸಮಾಧಿ ಬಳಿ ಅಂತ್ಯಕ್ರಿಯೆ - Mahanayaka
11:22 PM Tuesday 21 - October 2025

ಧ್ರುವ ಹುಟ್ಟೂರಲ್ಲಿ ನೀರವ ಮೌನ: ಸಕಲ ಸಿದ್ಧತೆ, ತಂದೆ–ತಾಯಿ ಸಮಾಧಿ ಬಳಿ ಅಂತ್ಯಕ್ರಿಯೆ

dhruvanarayan
11/03/2023

ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಹುಟ್ಟೂರು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು ಊರ ಮಗನನ್ನು ಕಳೆದುಕೊಂಡು ಕಂಗಲಾಗಿದ್ದಾರೆ.

ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ತೋಟದಲ್ಲಿ ತಂದೆ-ತಾಯಿ ಸಮಾಧಿ ಬಳಿ ಆರ್.ಧ್ರುವನಾರಾಯಣ ಅವರ ಅಂತಿಮ ಕ್ರಿಯೆ ಭಾನುವಾರ ನಡೆಯಲಿದ್ದು ಸಕಲ ಸಿದ್ಧತೆ ನಡೆಸಲಾಗುತ್ತಿದೆ.‌

ಹೆಗ್ಗವಾಡಿ ಗ್ರಾಮದ ಅಂಬೇಡ್ಕರ್ ಸಮಯದಾಯ ಭವನ ಸಮೀಪ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಇದಕ್ಕೂ ಮುನ್ನ ಚಾಮರಾಜನಗರದ ಕಾಂಗ್ರೆಸ್ ಕಚೇರಿಗೆ ಪಾರ್ಥಿವ ಶರೀರ ಬರಲಿದೆ. ಅಲ್ಲಿ, ಪಕ್ಷದ ವತಿಯಿಂದ ಗೌರವ ಸಲ್ಲಿಸಿ ಚಾಮರಾಜನಗರದ ವಿವಿಧ ಬೀದಿಗಳಲ್ಲಿ ಅಂತಿಮ ಯಾತ್ರೆ ನಡೆಯಲಿದ್ದು ರಾತ್ರಿ 8 ರ ಸುಮಾರಿಗೆ ಹುಟ್ಟೂರಿಗೆ ತಲುಪಲಿದೆ.

ರಾತ್ರಿ ಇಡೀ ಜಾಗರಣೆ, ಭಜನೆ ಕಾರ್ಯಕ್ರಮ ನಡೆಯಲಿದ್ದು
ಇಂದು ರಾತ್ರಿ 3-5 ಸಾವಿರ ಮಂದಿಗೆ ಊಟ, ಭಾನುವಾರ ಬೆಳಗ್ಗೆ 10 ಸಾವಿರ ಮಂದಿಗೆ ಉಪಹಾರ ವ್ಯವಸ್ಥೆಗೆ ಸಿದ್ಧತೆ ಮಾಡಲಾಗುತ್ತಿದೆ.

ತೋಟದಲ್ಲಿನ ತಂದೆ-ತಾಯಿ ಸಮಾಧಿ ಸಮೀಪ ಧ್ರುವ ಅಂತಿಮ ಕ್ರಿಯೆ ನಡೆಸಲು ತೀರ್ಮಾನಿಸಲಾಗಿದ್ದು ಹಿಂದೂ ಧಾರ್ಮಿಕ ವಿಧಿ-ವಿಧಾನದಂತೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ತೋಟದಲ್ಲಿ ಹೂಳಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಭಾನುವಾರದ ನಡೆಯುವ ಅಂತಿಮ ಕ್ರಿಯೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ, ಪರಂ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರುಗಳು ಭಾಗಿಯಾಗಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ