'ಭಾರತ್' ಚರ್ಚೆ: ಬೋಸ್ ರನ್ನು ಮೊದಲ ಪ್ರಧಾನಿ ಎಂದು ಘೋಷಣೆ ಮಾಡಿ: ಪ್ರಧಾನಿಗೆ ಸುಬ್ರಮಣಿಯನ್ ಸ್ವಾಮಿ ಟಾಂಗ್ - Mahanayaka
6:04 PM Wednesday 22 - October 2025

‘ಭಾರತ್’ ಚರ್ಚೆ: ಬೋಸ್ ರನ್ನು ಮೊದಲ ಪ್ರಧಾನಿ ಎಂದು ಘೋಷಣೆ ಮಾಡಿ: ಪ್ರಧಾನಿಗೆ ಸುಬ್ರಮಣಿಯನ್ ಸ್ವಾಮಿ ಟಾಂಗ್

06/09/2023

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಹೆಸರನ್ನು ಮರುನಾಮಕರಣ ಮಾಡುವ ಹುನ್ನಾರದಲ್ಲಿದ್ದಾರೆ. ಹೀಗಾಗಿ ಜವಾಹರ್ ಲಾಲ್ ನೆಹರೂ ಅವರ ಬದಲಿಗೆ ಸ್ವತಂತ್ರ್ಯ ಸೇನಾನಿ ಸುಭಾಶ್ ಚಂದ್ರ ಬೋಸ್ ರನ್ನು ಮೊದಲ ಪ್ರಧಾನಿ ಎಂದು ಘೋಷಣೆ ಮಾಡಿ ಎಂದು ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸುಭಾಷ್ ಚಂದ್ರ ಬೋಸ್ ಅವರನ್ನು 1943ರ ಭಾರತದ ಮೊದಲ ಪ್ರಧಾನಿ ಎಂದು ಘೋಷಿಸಬೇಕು. ಸುಭಾಶ್ ಚಂದ್ರ ಬೋಸ್ ಅವರು ಅಂದು ಹೋರಾಡಿದ್ದು ಕಠಿಣವಾಗಿತ್ತು. ಬ್ರಿಟಿಷ್ ಸಹಭಾಗಿತ್ವದಲ್ಲಿ ನೆಹರು ವಂಚನೆಯ ಮೂಲಕ ಪಡೆದುಕೊಂಡಿರುವಂಥದ್ದಲ್ಲ ಎಂದು ಹೇಳಿದ್ದಾರೆ.

ರಿಪಬ್ಲಿಕ್ ಆಫ್ ಇಂಡಿಯಾ ಬದಲಿಗೆ ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ಮಾಡುವ ಕುರಿತು ಈಗ ದೇಶದಲ್ಲಿ ಚರ್ಚೆ ಶುರುವಾಗಿದೆ. ಇನ್ನು ಕೇಂದ್ರ ಸರ್ಕಾರ ಇದೇ ತಿಂಗಳು ಕರೆದಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಸಂವಿಧಾನದಲ್ಲಿ ಬಳಸಲಾಗಿರುವ ಇಂಡಿಯಾ ಪದ ಬದಲಿಗೆ ಭಾರತ ಎಂದು ಸೇರಿಸುವ ಬಗ್ಗೆ ವಿಧೇಯವನ್ನು ಮಂಡಿಸಲಿದೆ ಎಂದು ಹೇಳಲಾಗುತ್ತಿದೆ.

ಇಂಡಿಯಾ ಬದಲಿಗೆ ಭಾರತ್ ಎಂದು ಮರುನಾಮಕರಣ ಮಾಡುತ್ತಿರುವ ಬಗ್ಗೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ವಿಪಕ್ಷಗಳು ತಮ್ಮ ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿರುವುದಕ್ಕೆ ಹೆದರಿ ಕೇಂದ್ರ ಸರ್ಕಾರ ಇಂಡಿಯಾ ಬದಲಿಗೆ ಭಾರತ್ ಎಂದು ಮರುನಾಮಕರಣ ಮಾಡುತ್ತಿದೆ ಎಂದು ಆರೋಪಿಸುತ್ತಿವೆ.

ಇತ್ತೀಚಿನ ಸುದ್ದಿ