ಅನೈತಿಕ ಸಂಬಂಧಕ್ಕೆ ಅಡ್ಡಿಯಾದ 2 ವರ್ಷದ ಮಗುವನ್ನು ಕೊಂದ ಪಾಪಿ ತಂದೆ!

ಮುಂಬೈ: ತಂದೆಯೊಬ್ಬ ತನ್ನ ಎರಡು ವರ್ಷದ ಮಗುವನ್ನು ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಕೊಂದ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ.
ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಮದುವೆಯಾಗಲು ಆರೋಪಿಯು ಮಗುವನ್ನು ಕೊಂದಿರುವುದಾಗಿ ಪೋಲಿಸರಿಗೆ ತಿಳಿಸಿದ್ದಾನೆ.
ಆರೋಪಿಯು”ಗಾರ್ಮೆಂಟ್ಸ್ ನಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದನು. ತನ್ನನ್ನು ಮದುವೆಯಾಗಲು ಬಯಸಿದರೆ ಹೆಂಡತಿ ಮತ್ತು ಮಗನನ್ನು ತೊರೆದು ಬರಲು ಆಕೆ ಕೇಳಿದ್ದಳು. ನಂತರ ಆರೋಪಿಯು ಮಗುವನ್ನುಕೊಲ್ಲಲು ಯೋಜನೆ ರೂಪಿಸಿದ್ದನು ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಆರೋಪಿಯು ಮಗುವನ್ನು ಕೊಂದು ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಎಸೆದಿದ್ದು, ಶಾಹು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬುಧವಾರ ಮುಂಜಾನೆ ಕೇಮ್ಕರ್ ಚೌಕ್ ಬಳಿಯ ಮಾಹಿಮ್-ಸಿಯಾನ್ ಕ್ರೀಕ್ ಲಿಂಕ್ ರಸ್ತೆಯಲ್ಲಿ ಮಗುವಿನ ಮೃತದೇಹ ಪತ್ತೆ ಹಚ್ಚಿದರು. ಮೃತದೇಹದ ತಲೆ ಮತ್ತು ಬಲ ಮಣಿಕಟ್ಟಿಗೆ ಇಲಿಗಳು ಕಚ್ಚಿರುವುದಾಗಿ ಅವರು ತಿಳಿಸಿದರು.
ಚಾಕೊಲೇಟ್ ಕೊಡಿಸುವುದಾಗಿ ಪತ್ನಿಯಿಂದ ಮಗನನ್ನು ಎತ್ತುಕೊಂಡು ಹೋಗಿ ಕೊಲೆ ಮಾಡಿದ್ದ. ಬಳಿಕ ಮಗುವಿನ ಶವವನ್ನು ಮಾಹಿಮ್ ನದಿಗೆ ಎಸೆದಿದ್ದಾನೆ. ಆರೋಪಿಯನ್ನು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 302 (ಕೊಲೆ), 362 (ಅಪಹರಣ) ಮತ್ತು ಇತರರ ಅಡಿಯಲ್ಲಿ ಬಂಧಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw