ಫೆಲೆಸ್ತೀನ್ ನಲ್ಲಿ ಇಸ್ರೇಲ್ ನಿಂದ ಕ್ರೌರ್ಯದ ಆಟ: ಪಾಪ್ ಗಾಯಕಿಯಿಂದ ತೀವ್ರ ಖಂಡನೆ

ಫೆಲೆಸ್ತೀನ್ ನಲ್ಲಿ ಇಸ್ರೇಲ್ ನಡೆಸ್ತಾ ಇರುವ ಕ್ರೌರ್ಯವನ್ನು ತೀವ್ರವಾಗಿ ಖಂಡಿಸಿದ್ದ ಪಾಪ್ ಗಾಯಕಿ ದುವಾ ಲಿವ ಅವರು ಇದೀಗ ತನ್ನ ಖಂಡನೆಗೆ ಸ್ಪಷ್ಟೀಕರಣ ನೀಡಿದ್ದಾರೆ. ತಾನು ತನ್ನ ಖಂಡನೆಗೆ ಬದ್ಧವಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಗಾಝಾದಲ್ಲಿ ಇಸ್ರೇಲ್ ಜನಾಂಗ ಹತ್ಯೆ ನಡೆಸ್ತಾ ಇದೆ ಎಂದವರು ಹೇಳಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ನಾನು ಒಂದು ಅಭಿಪ್ರಾಯ ಹೇಳುವುದಕ್ಕಿಂತ ಮೊದಲು ಸಾಕಷ್ಟು ಯೋಚಿಸುತ್ತೇನೆ. ಆದರೆ ನಾನು ಹೇಳುತ್ತಿರುವುದು ಒಳ್ಳೆಯದಕ್ಕೆ ಎಂದು ನನಗೆ ಅನಿಸಿದರೆ ಅದಕ್ಕೆ ಬರುವ ಪ್ರತಿಕ್ರಿಯೆಗಳನ್ನು ಲೆಕ್ಕಿಸದೆ ನನ್ನ ಅಭಿಪ್ರಾಯವನ್ನು ಮಂಡಿಸುತ್ತೇನೆ ಮತ್ತು ನನ್ನ ಅಭಿಪ್ರಾಯಕ್ಕೆ ಬದ್ಧವಾಗಿರುತ್ತೇನೆ ಎಂದು ರೇಡಿಯೋ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ 88 ಮಿಲಿಯನ್ ಫಾಲೋವರ್ಸ್ ಗಳು ಇರುವ ಮತ್ತು ಗ್ರಾಮೀ ಪ್ರಶಸ್ತಿಗೆ ಪಾತ್ರರಾಗಿರುವ 28 ವರ್ಷದ ದುವಾ ಲಿವ ಅವರು ಆಲ್ ಐಸ್ ಆನ್ ರಫಾ ಎಂಬ ಇತ್ತೀಚಿನ ಹಾಶ್ ಟಾಗ್ ಮೇಲೆ ತನ್ನ ಅಭಿಪ್ರಾಯವನ್ನು ಮಂಡಿಸಿದ್ದರು. ಗಾಝಾದ ರಫಾ ನಗರದ ಮೇಲೆ ಇಸ್ರೇಲ್ ದಾಳಿ ಆರಂಭಿಸಿದ ಕೂಡಲೇ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಮಕ್ಕಳನ್ನು ಬೆಂಕಿಕೊಟ್ಟು ಸಾಯಿಸುವ ಕೃತ್ಯವನ್ನು ಯಾವ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ ಮತ್ತು ಇಸ್ರೇಲ್ ನ ಜನಾಂಗ ಹತ್ಯೆಯನ್ನು ತಡೆಯಲು ಜಗತ್ತು ಒಂದಾಗಬೇಕು ಎಂದವರು ಕರೆಕೊಟ್ಟಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth