ಕ್ರಿಕೆಟ್ ವೇಳೆ ಚೆಂಡು ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಬೆರಳು ಕತ್ತರಿಸಿದ ಪಾಪಿಗಳು! - Mahanayaka

ಕ್ರಿಕೆಟ್ ವೇಳೆ ಚೆಂಡು ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಬೆರಳು ಕತ್ತರಿಸಿದ ಪಾಪಿಗಳು!

patna
06/06/2023


Provided by

ಪಟಾನ್: ಕ್ರಿಕೆಟ್ ಪಂದ್ಯದ ವೇಳೆ ಬಾಲಕ ಚೆಂಡು ಮುಟ್ಟಿದ ಎಂಬ ಕಾರಣಕ್ಕೆ ಬಾಲಕನ ಚಿಕ್ಕಪ್ಪನ ಹೆಬ್ಬೆರಳನ್ನು ಕತ್ತರಿಸಿದ ಅಮಾನವೀಯ ಘಟನೆ ಗುಜರಾತ್ ನ ಪಟಾನ್ ಜಿಲ್ಲೆಯ ಕಾಕೋಶಿ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಶಾಲೆಯ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿತ್ತು. ಕ್ರಿಕೆಟ್ ನೋಡಲು ಬಂದಿದ್ದ ಬಾಲಕ ಪಂದ್ಯದ ವೇಳೆ ಚೆಂಡು ಮುಟ್ಟಿದ್ದ. ಇದರಿಂದ ಕೋಪಗೊಂಡ ಆರೋಪಿಗಳು ಬಾಲಕನಿಗೆ ಬೆದರಿಕೆ ಹಾಗೂ ಜಾತಿ ನಿಂದಿಸಿದ್ದರು. ಈ ವೇಳೆ ಬಾಲಕನ ಚಿಕ್ಕಪ್ಪ ಧೀರಜ್ ಪರ್ಮಾರ್ ಎಂಬವರು ಮಧ್ಯಪ್ರವೇಶಿಸಿ ವಿಷಯವನ್ನು ಅಲ್ಲೇ ಬಿಡುವಂತೆ ವಿವಾದ ಇತ್ಯಾರ್ಥಪಡಿಸಿದ್ದರು.

ಆದರೆ ಈ ವಿಚಾರವನ್ನು ಅಲ್ಲೇ ಬಿಡದ ಆರೋಪಿಗಳು ಧೀರಜ್ ಪರ್ಮಾರ್ ಹಿಂದೆ ಬಿದ್ದಿದ್ದು, ಅದೇ ದಿನ ಸಂಜೆ ಮಾರಕಾಸ್ತ್ರಗಳಿಂದ ಧೀರಜ್ ಪರ್ಮಾರ್ ಹಾಗೂ ಅವರ ಸಹೋದರ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೇಳೆ ಕೀರ್ತಿ ಅವರ ಹೆಬ್ಬೆರಳನ್ನೇ ಆರೋಪಿಗಳು ಕತ್ತರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆರೋಪಿಗಳ ವಿರುದ್ಧ ಎಸ್ ಸಿ/ ಎಸ್ ಟಿ/ ದೌರ್ಜನ್ಯ ತಡೆ ಕಾಯ್ದೆಯನ್ವಯ ದೂರು ದಾಖಲಾಗಿದೆ. ಈವರೆಗೆ ಯಾವುದೇ ಕ್ರಮಗಳಾಗಿರುವ ಬಗ್ಗೆ ಮಾಹಿತಿ ದೊರೆತಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ