ಆಸ್ತಿಗಾಗಿ ಸಹೋದರನನ್ನೇ ಮುಗಿಸಿದ ಸಹೋದರಿಯರು! - Mahanayaka
2:04 AM Wednesday 15 - October 2025

ಆಸ್ತಿಗಾಗಿ ಸಹೋದರನನ್ನೇ ಮುಗಿಸಿದ ಸಹೋದರಿಯರು!

tharekere
22/08/2024

ಚಿಕ್ಕಮಗಳೂರು: ಆಸ್ತಿಗಾಗಿ ಜನ ಈ ಮಟ್ಟಕ್ಕೆ ಇಳಿತಾರಾ? ತರೀಕೆರೆ ಪಟ್ಟಣದ ಚೌಡೇಶ್ವರಿ ಕಾಲೋನಿಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಆಸ್ತಿಗಾಗಿ ಸಹೋದರನನ್ನೇ ಸಹೋದರಿಯರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.


Provided by

ರಾಘವೇಂದ್ರ 40 ಮೃತ ದುರ್ದೈವಿಯಾಗಿದ್ದಾರೆ. ಬೆಳ್ಳಂಬೆಳಗ್ಗೆಯೇ ಕಣ್ಣಿಗೆ ಖಾರದ ಪುಡಿ ಎರಚಿ ರಕ್ತ ಸಂಬಂಧಿಕರೇ ಕೊಚ್ಚಿ ಹಾಕಿದ್ದಾರೆ.

ಆಸ್ತಿಗಾಗಿ ಇವರ ಕುಟುಂಬದ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇದೀಗ ಬಾವನ ಜೊತೆಗೆ ಸೇರಿ ಮೂವರು ಸಹೋದರಿಯರು ತಮ್ಮ ಸಹೋದರನ ಕಥೆಯನ್ನೇ ಮುಗಿಸಿದ್ದಾರೆ.

ಸಹೋದರನ ಕಣ್ಣಿಗೆ ಖಾರದ ಪುಡಿ ಎರಚಿದ್ದು, ಬಿದ್ದಿದ್ದ ಸಹೋದರನನ್ನು ಮನಸೋ ಇಚ್ಛೆ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಪೋಲಿಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ