ಇಂಗುಗುಂಡಿಯಲ್ಲಿ ಸಿಕ್ತು ಅಸ್ಥಿಪಂಜರ: ತಂದೆ ಸತ್ತ ಮೇಲೆ ಬಯಲಾಯ್ತು ಮಗನ ಕೊಲೆ ರಹಸ್ಯ - Mahanayaka

ಇಂಗುಗುಂಡಿಯಲ್ಲಿ ಸಿಕ್ತು ಅಸ್ಥಿಪಂಜರ: ತಂದೆ ಸತ್ತ ಮೇಲೆ ಬಯಲಾಯ್ತು ಮಗನ ಕೊಲೆ ರಹಸ್ಯ

12/08/2025


Provided by
Provided by
Provided by

Provided by
Provided by
Provided by
Provided by
Provided by
Provided by

ಹಾಸನ: 2 ವರ್ಷಗಳ ಹಿಂದೆ ನಡೆದ ಭೀಕರ ಕೊಲೆ ರಹಸ್ಯವೊಂದು ಇದೀಗ ಬಯಲಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸಂತೆಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಣದ ವಿಚಾರಕ್ಕೆ ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಈ ಘಟನೆ ಇದೀಗ ಆರೋಪಿ ತಂದೆ ಸಾವನ್ನಪ್ಪಿದ ಬಳಿಕ ಬೆಳಕಿಗೆ ಬಂದಿದೆ.

2023ರಲ್ಲಿ ಈ ಘಟನೆ ನಡೆದಿತ್ತು.  ರಘು(32) ಎಂಬಾತನನ್ನು ಆತನ ತಂದೆ ಗಂಗಾಧರ್ ಎಂಬಾತ  ಹಣದ ವಿಚಾರಕ್ಕೆ ಹತ್ಯೆ ಮಾಡಿದ್ದ. ಹತ್ಯೆಯ ಬಳಿಕ  ಮನೆಯ ಹಿಂಭಾಗದಲ್ಲಿರುವ ಇಂಗುಗುಂಡಿಯಲ್ಲಿ ಮಗನನ್ನು ಸಮಾಧಿ ಮಾಡಿದ್ದ. ರಘು ಕಾಣೆಯಾಗಿರುವ ಬಗ್ಗೆ ಸಂಬಂಧಿಕರು ಪ್ರಶ್ನೆ ಹಾಕಿದ್ದರೂ ಗಂಗಾಧರ್ ಸರಿಯಾದ ಉತ್ತರ ಸಿಕ್ಕಿರಲಿಲ್ಲ.

ಕೆಲವು ದಿನಗಳ ಹಿಂದೆ ಆರೋಪಿ ಗಂಗಾಧರ್ ಕೂಡ ಸಾವನ್ನಪ್ಪಿದ್ದಾನೆ. ಹೀಗಾಗಿ ಅಂತ್ಯ ಸಂಸ್ಕಾರಕ್ಕೆ ಮಗನನ್ನೂ ಕರೆಸುವಂತೆ ಸಂಬಂಧಿಕರು ಪಟ್ಟು ಹಿಡಿದಿದ್ದರು. ಸಂಬಂಧಿಕರಿಗೆ ಸರಿಯಾದ ಉತ್ತರ ನೀಡಲಾಗದೇ ಗಂಗಾಧರ್ ನ ಸಹೋದರ ರೂಪೇಶ್ ಅನಿವಾರ್ಯವಾಗಿ ಈ ವಿಚಾರವನ್ನು ಬಾಯ್ಬಿಟ್ಟಿದ್ದು, ಗಂಗಾಧರ್ ರಘುವನ್ನು ಕೊಲೆ ಮಾಡಿ ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಸಮಾಧಿ ಮಾಡಿದ್ದಾನೆ ಎನ್ನುವುದು ಬಯಲಿಗೆ ಬಂದಿದೆ.

ಘಟನೆಯನ್ನು ಆಲೂರು ಪೊಲೀಸರು ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇಂಗುಗುಂಡಿಯಿಂದ ಹೊರತೆಗೆದ ಮೂಳೆಗಳ ಡಿಎನ್‌ಎ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಈ ಪರೀಕ್ಷೆಯಿಂದ ರಘುನ ಗುರುತನ್ನು ದೃಢಪಡಿಸಲಾಗುವುದು. ಜೊತೆಗೆ, ಕೊಲೆಯಲ್ಲಿ ಗಂಗಾಧರ್‌ಗೆ ಸಹಾಯ ಮಾಡಿದ ಇತರ ವ್ಯಕ್ತಿಯ ಬಗ್ಗೆಯೂ ತನಿಖೆ ನಡೆಯುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ