ಬಿಸಿಯಾಗಿದ್ದ ಇಸ್ತ್ರಿಪೆಟ್ಟಿಗೆಯನ್ನು ಹಾಸಿಗೆ ಮೇಲಿಟ್ಟು ತೆರಳಿದ ವಿದ್ಯಾರ್ಥಿನಿಯರು | ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ - Mahanayaka

ಬಿಸಿಯಾಗಿದ್ದ ಇಸ್ತ್ರಿಪೆಟ್ಟಿಗೆಯನ್ನು ಹಾಸಿಗೆ ಮೇಲಿಟ್ಟು ತೆರಳಿದ ವಿದ್ಯಾರ್ಥಿನಿಯರು | ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ

deralakatte
21/12/2022

ಬಿಸಿಯಾಗಿದ್ದ ಇಸ್ತ್ರಿ ಪೆಟ್ಟಿಗೆಯಿಂದ ಹಾಸಿಗೆಗೆ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದ ಘಟನೆ ಮಂಗಳೂರಿನ ದೇರಳಕಟ್ಟೆಯ ಫ್ಲ್ಯಾಟ್‌ ವೊಂದರಲ್ಲಿ ನಡೆದಿದೆ.

ಫ್ಲ್ಯಾಟ್ ಮ್ಯಾನೇಜರ್‌ ಶಾಹೀದ್ ಎಂಬುವವರ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅವಘಡ ತಪ್ಪಿದೆ. ದೇರಳಕಟ್ಟೆ ಖಾಸಗಿ ಆಸ್ಪತ್ರೆ ಬಳಿ ಇರುವ ಫ್ಲ್ಯಾಟ್‌ ನಲ್ಲಿ ಈ ಅವಘಡ ಸಂಭವಿಸಿದೆ.

ಇಲ್ಲಿಯ ರೂಂವೊಂದರಲ್ಲಿ ವಾಸಿಸುತ್ತಿರುವ ದಂತ ವೈದ್ಯಕೀಯ ವಿದ್ಯಾರ್ಥಿನಿಯರಿಬ್ಬರು ಬೆಳಗ್ಗೆ ಕಾಲೇಜಿನಲ್ಲಿ ಕಾರ್ಯಾಗಾರ ಇದೆಯೆಂದು ಬಟ್ಟೆಗೆ ಇಸ್ತ್ರಿ ಮಾಡಿ ಬೇಗನೇ ಕಾಲೇಜಿಗೆ ತೆರಳಿದ್ದರು.

ಇಸ್ತ್ರಿ ಹಾಕಿದ ಬಳಿಕ ಸ್ವಿಚ್ ಆಫ್ ಮಾಡಿ ಬಿಸಿಯಾಗಿದ್ದ ಇಸ್ತ್ರಿಪೆಟ್ಟಿಗೆಯನ್ನು ಮಲಗುವ ಹಾಸಿಗೆಯ ಮೇಲೆಯೇ ಇಟ್ಟು ಹೋಗಿದ್ದರು. ಇದೇ ವೇಳೆ ಇಸ್ತ್ತಿಪೆಟ್ಟಿಗೆಯ ಬಿಸಿಗೆ ಬೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕೊಠಡಿಯಲ್ಲಿ ಹೊಗೆ ತುಂಬಿಕೊಂಡಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ