ಪ್ರಿಯಾಂಕಾ ಗಾಂಧಿ ಪುತ್ರಿ ಸಂಪತ್ತಿನ ಬಗ್ಗೆ ನಕಲಿ ಪೋಸ್ಟ್: ತಪ್ಪು ಮಾಡಿದ ವ್ಯಕ್ತಿ ವಿರುದ್ಧ ಕೇಸ್ ಫೈಲ್

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಮಗಳು ಮಿರಾಯ ವಾದ್ರ ಅವರ ಸಂಪತ್ತಿಗೆ ಸಂಬಂಧಿಸಿದಂತೆ ನಕಲಿ ಪೋಸ್ಟ್ ಹಂಚಿಕೊಂಡ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಕ್ಸ್ ಜಾಲತಾಣದಲ್ಲಿ ಅನುಪ್ ವರ್ಮ ಎಂಬುವವ ಈ ನಕಲಿ ಪೋಸ್ಟನ್ನು ಹಂಚಿಕೊಂಡಿದ್ದು ಹಿಮಾಚಲ ಪ್ರದೇಶದ ಪೊಲೀಸರು ಕೇಸು ದಾಖಲಿಸಿದ್ದಾರೆ.
ನಿರಾಯಳಿಗೆ 3000 ಕೋಟಿ ರೂಪಾಯಿಯ ಸಂಪತ್ತಿದೆ ಎಂದು ಆತ ಟ್ವೀಟ್ ಮಾಡಿದ್ದ. ಇದರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. ಚುನಾವಣೆಯ ಸಂದರ್ಭದಲ್ಲಿ ಇಂತಹ ನಕಲಿ ಪೋಸ್ಟ್ ಗಳು ಧಾರಾಳ ಹರಿದಾಡುತ್ತಿದ್ದು ಇದು ಸಮುದಾಯದ ನಡುವೆ ಘರ್ಷಣೆಗೆ ಮತ್ತು ನಿರ್ದಿಷ್ಟ ಪಕ್ಷಗಳ ವರ್ಚಸ್ಸನ್ನು ಹಾಳು ಮಾಡುವುದಕ್ಕೆ ಕಾರಣವಾಗುತ್ತಿದ್ದು ಇಂತಹ ಸುಳ್ಳುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹ ಕೇಳಿ ಬಂದಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth