ಲಕ್ಕಿಡಿಪ್ ನಲ್ಲಿಯೂ ಪೆಟ್ರೋಲ್, ಡೀಸೆಲ್, ಗ್ಯಾಸ್ ಬಹುಮಾನ - Mahanayaka

ಲಕ್ಕಿಡಿಪ್ ನಲ್ಲಿಯೂ ಪೆಟ್ರೋಲ್, ಡೀಸೆಲ್, ಗ್ಯಾಸ್ ಬಹುಮಾನ

friends mgm
21/03/2021

ಉಡುಪಿ:  ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದಂತೆಯೇ ವಿವಿಧ ಪಂದ್ಯಾಟಗಳಲ್ಲಿ ಇದೀಗ ಪೆಟ್ರೋಲ್, ಡೀಸೆಲ್ ಗಳನ್ನೇ ಬಹುಮಾನವಾಗಿ ಘೋಷಿಸಲಾಗುತ್ತಿದೆ.  ಇದೇ ಸಂದರ್ಭದಲ್ಲಿ  ಉಡುಪಿ ಜಿಲ್ಲೆಯಲ್ಲಿ ವಿಶೇಷ ಲಕ್ಕಿಡಿಪ್ ವೊಂದು ಸದ್ದು ಮಾಡಿದೆ.


Provided by

ಫ್ರೆಂಡ್ಸ್ ಎಂಜಿಎಂ ತಂಡ ಕ್ರಿಕೆಟ್ ಪಂದ್ಯಾಟವನ್ನು ಏಪ್ರಿಲ್ 4ರಂದು ಈ ಪಂದ್ಯಾಟ ನಡೆಯಲಿದೆ. ಈ ಕ್ರಿಕೆಟ್ ಪಂದ್ಯಾಟದ ಖರ್ಚು ವೆಚ್ಚಗಳನ್ನು ಸುಧಾರಿಸಲು ಅನುಕೂಲವಾಗಲಿ ಎಂದು ಕ್ರಿಕೆಟ್ ತಂಡ ವಿಶೇಷ ಲಕ್ಕಿಡಿಪ್ ಮಾಡಿದೆ.

ಈ ಲಕ್ಕಿಡಿಪ್ ನ ಬೆಲೆ ಕೇವಲ 15 ರೂಪಾಯಿಗಳು. ಈ ಲಕ್ಕಿಡಿಪ್ ನಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನವಾಗಿ  10 ಲೀ. ಪೆಟ್ರೋಲ್, ದ್ವಿತೀಯ ಬಹುಮಾನ ಪಡೆದವರಿಗೆ  5 ಲೀ. ಡೀಸೆಲ್ ಹಾಗೂ ತೃತೀಯ ಬಹುಮಾನವಾಗಿ 3 ಲೀ. ಗ್ಯಾಸ್ ಬಹುಮಾನವಾಗಿ ಘೋಷಿಸಲಾಗಿದೆ. ಈ ಲಕ್ಕಿ ಡಿಪ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚಿನ ಸುದ್ದಿ