ಅನಾಥ ಮೃತದೇಹಗಳಿಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು, ಪೊಲೀಸ್ ನೇತೃತ್ವದಲ್ಲಿ ಅಂತ್ಯಸಂಸ್ಕಾರ - Mahanayaka
11:36 AM Thursday 11 - December 2025

ಅನಾಥ ಮೃತದೇಹಗಳಿಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು, ಪೊಲೀಸ್ ನೇತೃತ್ವದಲ್ಲಿ ಅಂತ್ಯಸಂಸ್ಕಾರ

nithyananda valakadu
30/09/2023

ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಅಸ್ವಸ್ಥ ಗೊಂಡು ಬಿದ್ದಿದ್ದ ಗಾಯಾಳು ಮತ್ತು ರಾಜಾಂಗಣದಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಸುಮಾರು ಒಂದು ತಿಂಗಳ ಹಿಂದೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು .ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದರು.

ಅವರ ವೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿ ಇಡಲಾಗಿತ್ತು.ಮಾಧ್ಯಮದ ಮೂಲಕ ತಿಳಿಯ ಪಡಿಸಲಾಗಿತ್ತು.ವಾರಾಸು ಬಾರದೆ ಇದ್ದ ಕಾರಣ ಮೃತ ದೇಹವನ್ನು ಹಿಂದೂ ರುದ್ರಭೂಮಿ ಬೀಡಿನ ಗುಡ್ಡೆಯಲ್ಲಿ ವಿಧಿ ವಿಧಾನ ಮೂಲಕ ಪೊಲೀಸ್ ಮತ್ತು ಒಳಕಾಡು ಅವರ ನೇತೃತ್ವದಲ್ಲಿ ದಫನ ಮಾಡಲಾಯಿತು.

ನಗರ ಠಾಣೆಯ ಪೊಲೀಸ್ ಎ ಎಸ್ ಐ ಅರುಣ್ ಹಂಗಾರಕಟ್ಟೆ, ಹೆಡ್ ಕಾನ್ ಕಾನ್ ಸ್ಟೇಬಲ್  ಮಾಳ ಹರೀಶ್, ಜಾಸ್ಮ ಕಾನೂನು ಪ್ರಕ್ರಿಯೆ ನಡೆಸಿದರು. ಹೊಸಬೆಳಕು ಆಶ್ರಮದ ಸಂಚಾಲಕಿ ತಾನುಲಾ ತರುಣ್, ಫ್ಲವರ್ ವಿಷ್ಣು ,ವಿಕಾಸ್ ಶೆಟ್ಟಿ, ಪ್ರದೀಪ್, ಅಣ್ಣಪ್ಪ ಪೂಜಾರಿ ಕಾರಂಬಳ್ಳಿ, ನಗರ ಸಭೆ, ಜಿಲ್ಲಾಸ್ಪತ್ರೆ ಇವರು ಸಹಕರಿಸಿದರು.

ಬಿಳಿ ಗೂಬೆ ರಕ್ಷಣೆ:

nithyananda valakadu

ಉಡುಪಿ: ಗಾಯಾಳಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಅಳಿಯುವಂಚಿನಲ್ಲಿರುವ ಬಿಳಿ ಬಣ್ಣದ ಗೂಬೆಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ರಕ್ಷಿಸಿದ್ದಾರೆ.

ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ರಾಜೇಶ್ ಕುಮಾರ ಅವರು, ಗಾಯಾಳು ಗೂಬೆಯನ್ನು ಪಶುವೈದ್ಯ ಡಾ. ಸಂದೀಪ್ ಕುಮಾರ್ ಅವರಲ್ಲಿ ಚಿಕಿತ್ಸೆಗೆ ಒಳಪಡಿಸಿದರು. ಬಳಿಕ ಗೂಬೆಯನ್ನು ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಅವರಿಗೆ ಹಸ್ತಾಂತರಿಸಿದರು.

ಇತ್ತೀಚಿನ ಸುದ್ದಿ