ಸಮಾಜ ಮುಖಿ - ನಮ್ಮ ಪಶುಸಖಿ  - Mahanayaka
12:24 PM Wednesday 20 - August 2025

ಸಮಾಜ ಮುಖಿ — ನಮ್ಮ ಪಶುಸಖಿ 

pashu sakhi
11/03/2023


Provided by

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ನೆಲಮಂಗಲ ತಾಲ್ಲೂಕಿನ ಹೆಸರುಘಟ್ಟ ಇಲ್ಲಿ  6 ದಿಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭಾರತದ ಗ್ರಾಮೀಣ ಮಹಿಳೆಯರ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿ ಸ್ವಾವಲಂಬನೆಯ ಜೀವನ ನಡೆಸಬೇಕೆಂದು ಭಾರತ ಸರ್ಕಾರವು   ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ.

ಅಂತಹ ಯೋಜನೆಗಳಲ್ಲಿ “ಪಶುಸಖಿ” ಯೋಜನೆಯು ಬಹಳ ಮುಖ್ಯ ಯೋಜನೆಯಾಗಿದೆ.  ಇದು   ಗ್ರಾಮೀಣ ಭಾಗದ ಮಹಿಳೆಯರಿಗೆ ತುಂಬಾ ಸಹಕಾರಿಯಾಗಿದೆ.    ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಮಹಿಳೆಯರಿಗೆ ಉಚಿತ ಊಟ ಮತ್ತು ವಸತಿ ಸೌಕರ್ಯಗಳನ್ನು ಒಳಗೊಂಡಂತೆ ತರಬೇತಿಯನ್ನು ನೀಡಲಾಯಿತು.  ಸಂಸ್ಥೆಯ ಸಹಾಯಕ ನಿರ್ದೇಶಕರಾದ  ಡಾ. ಜಯರಾಮ್ ಹಾಗೂ ಪಶು ವೈದ್ಯಾಧಿಕಾರಿಯಾದ ಡಾ. ತ್ರಿಪಾಠಿ  ಹಾಗೂ ಜಂಟಿ ನಿರ್ದೇಶಕರಾದ ಡಾ. ಸುಧಾಕರ್ ರವರು ಬಹಳ ಅಚ್ಚುಕಟ್ಟಾಗಿ ತರಬೇತಿಯನ್ನು ನೆರವೇರಿಸಿದ್ದರು.

ತರಬೇತಿಯ ಅಂತಿಮ ದಿನದಂದು  ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡಿದ್ದು  ಶಿಬಿರಾರ್ಥಿಗಳಿಗೆ ಪ್ರಮಾಣ ಪಾತ್ರವನ್ನು ವಿತರಿಸಲಾಯಿತು.  ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ “ಯೋಜನಾ ನಿರ್ದೇಶಕರಾದ ವಿಠ್ಠಲ್ ಕಾವಳೆ”ಯವರು  ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿ,  ಮಹಿಳೆಯರು  ಸರ್ಕಾರದ ಸವಲತ್ತುಗಳನ್ನು ಸಕಾಲದಲ್ಲಿ ಸದುಪಯೋಗ ಪಡಿಸಿಕೊಂಡು ಉತ್ತಮ ಆರ್ಥಿಕ ಸಾಧನೆಯನ್ನು ಮಾಡಬೇಕು.  ಮಹಿಳೆ ದೇಶದ ಬೆನ್ನೆಲುಬಾಗಿ ದುಡಿದು ಮನೆಯನ್ನು ಮತ್ತು ಸಮಾಜವನ್ನು ಸುಗಮವಾಗಿ ನಿಭಾಯಿಸುವವಳಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆನರಾ ಬ್ಯಾಂಕ್  ಗ್ರಾಮೀಣ ಸ್ವ ಉದ್ಯೋಗ ತರಬೇತಿ ( RSETI ) “ಸಂಸ್ಥೆಯ  ನಿರ್ದೇಶಕರಾದ  ಎಂ.ಗಿರಿಯಪ್ಪ” ಮಾತನಾಡಿ, ಶಿಬಿರಾರ್ಥಿಗಳಿಗೆ  ಅಂತರ ರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳನ್ನು ತಿಳಿಸುವುದರು. ಮಹಿಳೆಯರು  ಸ್ವಾವಲಂಬಿ ಜೀವನ ನಡೆಸಬೇಕಾದರೆ ಸ್ವ ಉದ್ಯೋಗ ಕೈಗೊಳ್ಳಬೇಕು. ಇದರಿಂದ ನಿಮ್ಮ ಬದುಕಿನಲ್ಲಿ  ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಜೀವನ ನಡೆಸಿದಂತೆ ಎಂದು ಹೇಳಿದರು.

ಮಹಿಳೆ ಸ್ವ ಉದ್ಯೋಗ ಮಾಡಲು ಮುನ್ನುಗ್ಗುವ ಮೊದಲು ಆತ್ಮ ಸ್ಥೈರ್ಯ ತುಂಬಿಕೊಂಡಿರಬೇಕು.  ತಾನು ಮಾಡುವ ಕೆಲಸದಲ್ಲಿ ಬಸವಣ್ಣನ ಕಾಯಕನಿಷ್ಠೆಯ ತತ್ವವನ್ನು ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ರವರ  ಪರಿಶ್ರಮದ ಪ್ರತಿಫಲವೇ ಇಂದು ಮಹಿಳೆ ಎಲ್ಲಾ ರಂಗದಲ್ಲೂ ತನ್ನದೇ ಛಾಪನ್ನು ಮೂಡಿಸುತ್ತಿದ್ದಾಳೆ ಎಂದರು.

ನೀವು ಸದೃಢ ಮನಸ್ಸಿನಿಂದ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಾಗ ಮಾತ್ರ  ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಭರವಸೆಯ ಮಾತುಗಳನ್ನಾಡಿದರು.  ಎಂದು  ಮಹಿಳೆಯರು ಗುಡಿ ಗುಂಡಾರಗಳ ಮುಂದೆ ಸರತಿ ಸಾಲು ನಿಲ್ಲುವುದನ್ನು ಬಿಟ್ಟು  ಗ್ರಂಥಾಲಯದಲ್ಲಿ ಕುಳಿತು ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಾಳೋ ಅಂದು ಈ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ  ಸಂಸ್ಥೆಯ ಸಿಬ್ಬಂದಿ ಹಾಗೂ  ಇತರರು  ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ