ರಾತ್ರಿ ಬೆಳಗಾಗುವ ಹೊತ್ತಲ್ಲಿ ಫೇಮಸ್ ಆಗೋ ಕನಸು: 'ಪಿಎಫ್ ಐ' ಹೆಸರು ದುರ್ಬಳಕೆ ಮಾಡಿ ಸುಳ್ಳು ಕೇಸ್ ಕೊಟ್ಟ ಯೋಧ ಜೈಲಿಗೆ..! - Mahanayaka
10:31 AM Wednesday 20 - August 2025

ರಾತ್ರಿ ಬೆಳಗಾಗುವ ಹೊತ್ತಲ್ಲಿ ಫೇಮಸ್ ಆಗೋ ಕನಸು: ‘ಪಿಎಫ್ ಐ’ ಹೆಸರು ದುರ್ಬಳಕೆ ಮಾಡಿ ಸುಳ್ಳು ಕೇಸ್ ಕೊಟ್ಟ ಯೋಧ ಜೈಲಿಗೆ..!

27/09/2023


Provided by

ಕೇರಳ ರಾಜ್ಯದಲ್ಲಿ ಯೋಧನನ್ನು ಅಪಹರಿಸಿ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಇದ್ದಕ್ಕಿದ್ದಂತೆ ಫೇಮಸ್‌ ಆಗಲು ಯೋಧನೇ ಸೃಷ್ಟಿಸಿಕೊಂಡ ಸುಳ್ಳು ಪ್ರಕರಣ ಎಂದು ಬಯಲಾಗಿದೆ.

ತನ್ನನ್ನು ಆರು ಮಂದಿ ಅಪಹರಿಸಿ ಥಳಿಸಿದ್ದಾರೆ. ಬೆನ್ನ ಮೇಲೆ ಹಸಿರು ಬಣ್ಣದಿಂದ PFI ಎಂದು ಬರೆದಿದ್ದಾರೆ ಎಂದು ಯೋಧ ಶೈನ್ ಕುಮಾರ್ ಅವರು ಪೊಲೀಸ್ ದೂರು ನೀಡಿದ್ದರು.

ಯೋಧನನ್ನು ಅಪಹರಿಸಿ ಹಲ್ಲೆ ನಡೆಸಲಾಗಿದೆ ಎಂಬ ಸುದ್ದಿ ವರದಿಯಾಗುತ್ತಿದ್ದಂತೆ ದೇಶಾದ್ಯಂತ ಪ್ರಕರಣ ಗಮನ ಸೆಳೆದಿತ್ತು. ಈ ಬಗ್ಗೆ ಎನ್‌ಐಎ ತನಿಖೆ ನಡೆಸಬೇಕೆಂದು ಹಲವರು ಆಗ್ರಹಿಸಿದ್ದರು.

ಆದರೆ ಇದೀಗ ಈ ಪ್ರಕರಣದ ಸತ್ಯಾಸತ್ಯತೆ ಹೊರಬಿದ್ದಿದೆ. ಶೀಘ್ರದಲ್ಲಿ ಪ್ರಸಿದ್ಧಿ ಪಡೆಯಲು ಯೋಧ ಮಾಡಿರುವ ನಾಟಕ ಎನ್ನುವುದನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಯೋಧನ ನಿರ್ದೇಶನದಂತೆ ಆತನ ಸ್ನೇಹಿತ ಜೋಷಿ ಎಂಬಾತ ಬೆನ್ನ ಮೇಲೆ PFI ಎಂದು ಹಸಿರು ಬಣ್ಣದಲ್ಲಿ ಬರೆದಿದ್ದ. ಬರೆಯಲು ಬಳಸಿದ ಪೈಂಟ್‌ ಹಾಗೂ ಬ್ರಷ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶೈನ್‌ ಕುಮಾರ್‌ಗೆ ಪ್ರಚಾರ ಹಾಗೂ ಖ್ಯಾತಿ ಪಡೆಯುವ ಉದ್ದೇಶ ಇತ್ತು. ಹೀಗಾಗಿ ಈ ನಾಟಕ ಮಾಡಿದೆವು ಎಂದು ಜೋಷಿ ತಪ್ಪೊಪಿಕೊಂಡಿದ್ದಾನೆ. ಸದ್ಯ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೊಲ್ಲಂ ಗ್ರಾಮೀಣ ಹೆಚ್ಚುವರಿ ಎಸ್ಪಿ ಆರ್ ಪ್ರತಾಪನ್ ನಾಯರ್ ಈ ಕುರಿತು ಮಾತನಾಡಿ, “ಅವರು ಕಡಕ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಕುರಿತು ತನಿಖೆ ಮಾಡುವ ಸಮಯದಲ್ಲಿ ಅವರ ದೂರು ಸುಳ್ಳು ಎಂದು ತಿಳಿದುಬಂದಿದೆ. ಹೀಗಾಗಿ ಅವರನ್ನು ಇಂದು ಬಂಧಿಸಲಾಯಿತು’ ಎಂದಿದ್ದಾರೆ.

ಇತ್ತೀಚಿನ ಸುದ್ದಿ