ಕ್ರೂರ: ರಜೆಯಲ್ಲಿ ಮನೆಗೆ ಬಂದಿದ್ರು ಯೋಧ: ಸೈನಿಕನನ್ನು ಅಪಹರಿಸಿ ಹತ್ಯೆ..! - Mahanayaka

ಕ್ರೂರ: ರಜೆಯಲ್ಲಿ ಮನೆಗೆ ಬಂದಿದ್ರು ಯೋಧ: ಸೈನಿಕನನ್ನು ಅಪಹರಿಸಿ ಹತ್ಯೆ..!

17/09/2023


Provided by

ಮಣಿಪುರದ ಗ್ರಾಮವೊಂದರಲ್ಲಿ ಸೈನಿಕನನ್ನು ಅವರ ಮನೆಯಿಂದ ಅಪಹರಿಸಿ ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ. ರಜೆಯಲ್ಲಿ ಮನೆಗೆ ಬಂದಿದ್ದ ಸೈನಿಕ ಸೆರ್ಟೊ ಥಂಗ್ಥಾಂಗ್ ಕೋಮ್ ಅವರನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಅವರ ಮನೆಯಿಂದ ಅಪಹರಿಸಲಾಗಿದೆ. ಇಂದು ಅವರ ಶವ ಪತ್ತೆಯಾಗಿದೆ.

ನಿನ್ನೆ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಅಪರಿಚಿತ ಸಶಸ್ತ್ರ ಹೊಂದಿದ್ದ ವ್ಯಕ್ತಿಗಳು ಅವರನ್ನು ಅವರ ಮನೆಯಿಂದ ಅಪಹರಿಸಿದ್ದಾರೆ. ಈ ಘಟನೆಯ ಏಕೈಕ ಪ್ರತ್ಯಕ್ಷದರ್ಶಿಯಾದ ಅವರ 10 ವರ್ಷದ ಮಗನ ಪ್ರಕಾರ, ತಂದೆಯವರು ಮನೆಯ ಮುಂದೆ ಕೆಲಸ ಮಾಡುತ್ತಿದ್ದಾಗ ಮೂವರು ಪುರುಷರು ಅವರ ಮನೆಗೆ ಪ್ರವೇಶಿಸಿದರು.

ಆರೋಪಿಗಳು ಸಿಪಾಯಿ ಕೋಮ್ ಅವರ ತಲೆಯ ಮೇಲೆ ಪಿಸ್ತೂಲ್ ಇರಿಸಿ ಅವರನ್ನು ಬಿಳಿ ವಾಹನಕ್ಕೆ ಬಲವಂತವಾಗಿ ಹತ್ತಿಸಿದರು ಎಂದು ಅವರ ಮಗ ಪೊಲೀಸರಿಗೆ ತಿಳಿಸಿದ್ದಾರೆ.
ಇಂಫಾಲ್ ಪೂರ್ವದ ಮೊಂಗ್ಜಾಮ್‌ನ ಪೂರ್ವದಲ್ಲಿರುವ ಖುನಿಂಗ್ಥೆಕ್ ಗ್ರಾಮದಲ್ಲಿ ಅವರ ಶವ ಪತ್ತೆಯಾಗಿದೆ. ಸೈನಿಕನ ತಲೆಯ ಮೇಲೆ ಒಂದು ಗುಂಡು ಇತ್ತು ಎಂದು ಅವರ ಸಹೋದರ ಮತ್ತು ಸೋದರ ಮಾವ ದೃಢಪಡಿಸಿದರು. ಸೈನಿಕ ಕೋಮ್ ಅವರು ಪತ್ನಿ, ಮಗಳು ಮತ್ತು ಪುತ್ರನನ್ನು ಅಗಲಿದ್ದಾರೆ.

ಸೈನಿಕನ ಹತ್ಯೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ಸೇನೆಯು ತಂಡವನ್ನು ರವಾನಿಸಿದೆ ಎಂದು ಅದು ಹೇಳಿದೆ.

ಇತ್ತೀಚಿನ ಸುದ್ದಿ