ಸೋಲು ಮರೆತು IND-NZ ಪಂದ್ಯಕ್ಕೆ ಹುರಿದುಂಬಿಸಿದ ಫ್ಯಾನ್ಸ್ ! - Mahanayaka
11:44 AM Saturday 18 - October 2025

ಸೋಲು ಮರೆತು IND-NZ ಪಂದ್ಯಕ್ಕೆ ಹುರಿದುಂಬಿಸಿದ ಫ್ಯಾನ್ಸ್ !

india new zealand t20
26/10/2021

ಬೆಂಗಳೂರು: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಪಾಕಿಸ್ತಾನದ ಎದುರು ಭಾರತ ಮೊದಲ ಸೋಲು ಅನುಭವಿಸಿತ್ತು. ಇದು ಕ್ರಿಕೆಟ್ ಪ್ರಿಯರಿಗೆ ಭಾರಿ ನೋವುಂಟಾಗಿತ್ತು. ಈಗ ಅದರಿಂದ ಚೇತರಿಕೊಂಡಿದ್ದು #ಮತ್ತೆಘರ್ಜಿಸಿ ಎನ್ನುವ ಹ್ಯಾಷ್ ಟ್ಯಾಗ್ ಮೂಲಕ ಭಾರತ ತಂಡವನ್ನು  ಹುರಿದುಂಬಿಸಿದ್ದಾರೆ.


Provided by

ಸಾಮಾಜಿಕ ಜಾಲತಾಣ ‘ಕೂ’ ನಲ್ಲಿ ಈ ಕುರಿತು ಕ್ರಿಕೆಟಿಗರು ಹಾಗು ಸಾಕಷ್ಟು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು  ವ್ಯಕ್ತಪಡಿಸಿದ್ದಾರೆ.  ‘ಭಾರತ ಮತ್ತಷ್ಟು ಗಟ್ಟಿಯಾಗಿ ಹೊರಮೊಮ್ಮಲಿದೆ’ ಎಂದು ಕ್ರಿಕೆಟಿಗ ವ್ರಿದ್ಧಿಮಾನ್ ಸಾಹ ಅಭಿಪ್ರಾಯಪಟ್ಟಿದ್ದಾರೆ.

‘ಮತ್ತೊಮ್ಮೆ ನಿಮ್ಮ ಆರ್ಭಟವನ್ನು ತೋರಿಸಿ ಗಟ್ಟಿಯಾಗಿ #ಮತ್ತೆಘರ್ಜಿಸಿ ಆದ್ರೆ ಮೊನ್ನೆಯ ಸಪ್ಪೆಯಾದ ಘರ್ಜನೆ ಮಾತ್ರ ಮಾಡಬ್ಯಾಡ್ರಿ. ಹುಲಿಯ ಬೇಟೆ ತಪ್ಪಿದ ಮಾತ್ರಕ್ಕೆ ಉಪವಾಸ ಇರಲ್ಲ ಮತ್ತೊಂದು ದಿನ ಭರ್ಜರಿ ಬೇಟೆ ಇದ್ದೇ ಇರತ್ತೆ’  ರಾಜನಂದಿನಿ  ಎನ್ನುವವರು ಕೂ ಮಾಡಿದ್ದಾರೆ.

‘ಪಾಕ್ ವಿರುದ್ಧದ ಸೋಲನ್ನ ಮರೆಸುವ ಪ್ರೊಸೆಸ್ ಶುರುವಾಗ್ಲಿ’ ಎಂದು ಸುನೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆಲುವು ಸಾಧಿಸುತ್ತದೆಯೇ ಎನ್ನುವ ಕ್ರಿಕೆಟ್ ಅಭಿಮಾನಿಯೊಬ್ಬರ ಪ್ರಶ್ನೆಗೆ ಸಾಕಷ್ಟು ಮಂದಿ ಗೆಲುವು ಪಕ್ಕಾ ಎಂದು ಓಟ್ ಮಾಡಿದ್ದಾರೆ.

‘ಭಾರತ ತಂಡದಲ್ಲಿ ಯಾವುದೇ ಸಮಸ್ಯೆಯಿಲ್ಲ ತಂಡ ಸದೃಢವಾಗಿದೆ ಆದರೆ, ಮೊನ್ನೆಯ ಪಂದ್ಯ ಕೆಲವು ಚಿಕ್ಕಪುಟ್ಟ ತಪ್ಪುಗಳಿಂದ ಸೋತಿರಬಹುದು ಆದರೆ, ಪುನಃ ಭಾರತ ತಂಡ ಫೀನಿಕ್ಸ್ ನಂತೆ ಎದ್ದು ಬರಲಿದೆ ಎಂಬ ವಿಸ್ವಾಸವಿದೆ’ ಎಂದು ಕಾರ್ತಿಕ್ ಎನ್ನುವವರು ಕೂ ಮಾಡಿದ್ದಾರೆ.

‘ಮುಂಬರಲಿರುವ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದಲ್ಲಿ ಕ್ರಿಕೆಟ್ ಪ್ರಿಯರ ಹಾರೈಕೆಯೊಂದಿಗೆ! ಭಾರತ ಗೆಲ್ಲುವ ಮೂಲಕ ಪುಟಿದೇಳಲಿದೆ!’ ಎಂದು ನರೇಶ್ ಎನ್ನುವವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ