ಮಣಿಪುರದಲ್ಲಿ ‌ನಿಲ್ಲದ ಹಿಂಸಾಚಾರ: ಮುಂದುವರೆದ ರಕ್ತಕಾಳಗ; ಗೀತರಚನೆಕಾರ ಸೇರಿ ಹಲವಾರು ಸಾವು - Mahanayaka

ಮಣಿಪುರದಲ್ಲಿ ‌ನಿಲ್ಲದ ಹಿಂಸಾಚಾರ: ಮುಂದುವರೆದ ರಕ್ತಕಾಳಗ; ಗೀತರಚನೆಕಾರ ಸೇರಿ ಹಲವಾರು ಸಾವು

01/09/2023


Provided by

ರಕ್ತಸಿಕ್ತ ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ. ಮತ್ತೆ ನಡೆದ ಗುಂಡಿನ ಚಕಮಕಿಯಲ್ಲಿ ಕುಕಿ-ಜೋ ಗೀತರಚನೆಕಾರ ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ.

ಗೀತರಚನೆಕಾರ ಎಲ್ಎಸ್ ಮಂಗ್ಬೋಯಿ ಲುಂಗ್ಡಿಮ್ (42) ಮತ್ತು ಇತರ ಇಬ್ಬರು ಕುಕಿ-ಜೋ ಬುಡಕಟ್ಟು ಜನಾಂಗದವರು ನಿನ್ನೆ ನಡೆದ ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚುರಾಚಂದ್‌ಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಂಜೆ ನಂತರ ಲುಂಗ್ಡಿಮ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅವರನ್ನು ರಸ್ತೆಯ ಮೂಲಕ ಗುವಾಹಟಿಗೆ ಸ್ಥಳಾಂತರಿಸಲಾಯಿತು. ಆದರೆ ಅವರು ಸಾವನ್ನಪ್ಪಿದರು. ನಂತರ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿ ಸಹ ಸಾವನ್ನಪ್ಪಿದ್ದಾರೆ.

ಇನ್ನು ಇಂದು ನಡೆದ ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ಇನ್ನಿಬ್ಬರು ಆದಿವಾಸಿಗಳು ಸಾವನ್ನಪ್ಪಿದ್ದು, ಇಬ್ಬರು ಆದಿವಾಸಿಗಳು ಗಾಯಗೊಂಡಿದ್ದಾರೆ.

ಇತ್ತೀಚಿನ ಸುದ್ದಿ