ಸೋನು ಶ್ರೀನಿವಾಸ್ ಗೌಡ ಕೇಸ್: ಮಗುವಿನ ತಂದೆ-ತಾಯಿಗೆ ಕೌನ್ಸಿಲಿಂಗ್ ಮಾಡಲು ಮುಂದಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ - Mahanayaka

ಸೋನು ಶ್ರೀನಿವಾಸ್ ಗೌಡ ಕೇಸ್: ಮಗುವಿನ ತಂದೆ–ತಾಯಿಗೆ ಕೌನ್ಸಿಲಿಂಗ್ ಮಾಡಲು ಮುಂದಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

sonu srinivas gowda
03/04/2024

ಬೆಂಗಳೂರು: ಸೋನು ಶ್ರೀನಿವಾಸ್ ಗೌಡ ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ.

ಮಗುವಿನ ತಂದೆ ತಾಯಿ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲು ಇಲ್ಲವೇ ತಂದೆ ತಾಯಿಗೆ ಮಗುವನ್ನು ವಾಪಸ್ ಕೊಡಿಸಲು ರಕ್ಷಣಾ ಆಯೋಗ ಮುಂದಾಗಿದೆ.

ಮಗುವನ್ನು ಅಕ್ರಮವಾಗಿ ದತ್ತು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸೋನು ಶ್ರೀನಿವಾಸಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಮಗುವಿನ ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ ಎಂದು ವರದಿಯಾಗಿದೆ.

ಮಗುವನ್ನು ಸೋನು ಶ್ರೀನಿವಾಸ್ ಗೌಡ ಕರೆದುಕೊಂಡು ಹೋದ ಬಳಿಕವೂ ಮಗುವಿನ ಪೋಷಕರು ಯಾಕೆ ದೂರು ನೀಡಿಲ್ಲ,  ಅವರು ಆಮಿಷಗಳಿಗೆ ಒಳಗಾಗಿದ್ದರಾ? ಎಂಬ ಆಯಾಮಗಳಲ್ಲಿ ಕೌನ್ಸಿಲಿಂಗ್ ಮಾಡಿ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ