50ನೇ ವಯಸ್ಸಿನಲ್ಲಿ 2ನೇ ಮದುವೆ ಕನಸು ಕಂಡ ಮಾವ ಸೊಸೆಯಿಂದಲೇ ಅತ್ತೆಯ ಕೊಲೆ ಮಾಡಿಸಿದ!

ಮಧ್ಯಪ್ರದೇಶ: 50ನೇ ವಯಸ್ಸಿಗೆ ಇನ್ನೊಂದು ಮದುವೆಯ ಕನಸುಕಂಡ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಸೊಸೆಯಿಂದಲೇ ಹತ್ಯೆ ಮಾಡಿಸಿದ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.
ವಾಲ್ಮಿಕಿ ಕೋಲ್ ಎಂಬಾತ ಈ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು, ಈತನ ಸೊಸೆ 25 ವರ್ಷ ವಯಸ್ಸಿನ ಕಾಂಚನ್ ಕೋಲ್ ತನ್ನ ಮಾವನ ಎರಡನೇ ಮದುವೆ ಕನಸು ಈಡೇರಿಸಲು ಅತ್ತೆಯನ್ನೇ ಕೊಂದು ಇದೀಗ ಕಂಬಿ ಎಣಿಸುತ್ತಿದ್ದಾಳೆ.
ವಾಲ್ಮೀಕಿ ಕೊಹ್ಲ್ ನ ಎರಡನೇ ಮದುವೆಯ ಕನಸಿಗೆ ಮೊದಲ ಪತ್ನಿ ಅಡ್ಡಿಯಾಗಿದ್ದಳು. ಇತ್ತ ದಿನನಿತ್ಯ ಅತ್ತೆ ಸೊಸೆಯ ನಡುವೆ ಜಗಳವನ್ನು ಕಂಡ ಈತ ತನ್ನ ಬೇಳೆ ಬೇಯಿಸಿಕೊಳ್ಳಲು ಸೊಸೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾನೆ.
ಅತ್ತೆಯನ್ನು ಕೊಂದು ಹಾಕು, ನಾನು ನಿನಗೆ 4 ಸಾವಿರ ರೂಪಾಯಿ ಬಹುಮಾನ ಕೊಡುತ್ತೇನೆ. ಪ್ರತೀ ತಿಂಗಳು ಇಂತಿಷ್ಟು ಹಣವೂ ಕೊಡುತ್ತೇನೆ ಎಂದು ಸೊಸೆಗೆ ಆಮಿಷ ನೀಡಿದ್ದಾನೆ.
ಮೊದಲೇ ಅತ್ತೆಯ ತೀವ್ರ ದ್ವೇಷ ಹೊಂದಿದ್ದ ಸೊಸೆ ಕಾಂಚನ್ ಕೋಲ್, ಮಾವನಿಂದಲೇ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಅತ್ತೆಯ ಹತ್ಯೆಗೆ ಮುಂದಾಗಿದ್ದು, ಅತ್ತೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ.
ಇದೀಗ ಮಾವ ಹಾಗೂ ಸೊಸೆ ಇಬ್ಬರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka