ರಾಜ್ಯದ ಜನತೆ ನಮಗೆ ಸೋತು ಗೆದ್ದವರು ಎಂಬ ಸರ್ಟಿಫಿಕೇಟ್ ನೀಡಿದ್ದಾರೆ | ಸತೀಶ್ ಜಾರಕಿಹೊಳಿ
04/05/2021
ಬೆಳಗಾವಿ: ರಾಜ್ಯದ ಜನತೆ ನಮಗೆ ಸೋತು ಗೆದ್ದವರು ಎಂಬ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸೋತಿದ್ದರೂ ತೀವ್ರ ಪೈಪೋಟಿ ಕೊಟ್ಟಿದ್ದೇವೆ. ಸ್ವತಃ ಬಿಜೆ ಪಿ ನಾಯಕರೆ ಇದನ್ನು ಒಪ್ಪಿಕೊಂಡಿದ್ದಾರೆ ನಮ್ಮ ಜನರು ನನ್ನನ್ನು ಗೆಲುವಿನ ದಡ ಸೇರಿಸಿದ್ದಾರೆ. ಬಿಜೆಪಿಗೆ ನಮ್ಮ ಶಕ್ತಿ ಎನು ಎಂಬುದನ್ನು ಈ ಚುನಾವಣೆ ಮೂಲಕ ತೋರಿಸಿದ್ದೆವೆ ಎಂದು ಅವರು ಹೇಳಿದರು.
ಚುನಾವಣೆ ಸೋತಿರಬಹುದು ಆದರೆ, ಪಕ್ಷಕ್ಕೆ ಬಹಳಷ್ಟು ಲಾಭವಾಗಿದೆ. ರಾಜ್ಯದ ಜನತೆಯ ಚಿತ್ತ ಬೆಳಗಾವಿ ಚುನಾವಣೆ ಮೇಲೆ ನೆಟ್ಟಿತ್ತು ಅಷ್ಟು ಸಾಕು. ಮುಂದಿನ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.




























