ರಸ್ತೆ ಬದಿಯ 10 ಟನ್ ಸ್ಫೋಟಕ ತುಂಬಿದ್ದ ಲಾರಿ ನಿಂತದ್ದು ಕಂಡು ಬೆಚ್ಚಿಬಿದ್ದ ಜನರು! - Mahanayaka

ರಸ್ತೆ ಬದಿಯ 10 ಟನ್ ಸ್ಫೋಟಕ ತುಂಬಿದ್ದ ಲಾರಿ ನಿಂತದ್ದು ಕಂಡು ಬೆಚ್ಚಿಬಿದ್ದ ಜನರು!

shivamogga lorry
25/09/2021


Provided by

ಶಿವಮೊಗ್ಗ:  10 ಟನ್ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಕಂಡು ನಾಗರಿಕರು ಬೆಚ್ಚಿ ಬಿದ್ದ ಘಟನೆ ಶಿವಮೊಗ್ಗ ನಗರದ ಹೊರವಲಯದ ತೀರ್ಥಹಳ್ಳಿ ರಸ್ತೆಯ ಸಹ್ಯಾದ್ರಿ ಕಾಲೇಜು ಮಾರ್ಗದ ಬಳಿಯಲ್ಲಿ ನಡೆದಿದೆ.

ಲಾರಿಯೊಂದು ಬಂದು ಇಲ್ಲಿನ ಗ್ಯಾರೇಜ್ ವೊಂದಕ್ಕೆ ಬಂದು ನಿಂತಿದ್ದು, ಲಾರಿಯಿಂದ ಇಳಿದ ಚಾಲಕ, ಟಯರ್ ದುರಸ್ತಿ ಮಾಡಲು ಗ್ಯಾರೇಜ್ ಸಿಬ್ಬಂದಿಗೆ ಹೇಳಿದ್ದಾನೆ. ಬಳಿಕ ಆತ ಊಟಕ್ಕೆ ತೆರಳಿದ್ದಾನೆ.  ಲಾರಿಯನ್ನು ಗಮನಿಸಿ ಅನುಮಾನಗೊಂಡ ಗ್ಯಾರೇಜ್ ಸಿಬ್ಬಂದಿ ಲಾರಿಯನ್ನು ಪರಿಶೀಲಿಸಿದಾಗ ಭಾರೀ ಪ್ರಮಾಣದ ಸ್ಫೋಟಕ ಕಂಡು ಬೆಚ್ಚಿ ಬಿದ್ದಿದ್ದು, ಲಾರಿಯನ್ನು ಬಿಟ್ಟು ಸ್ಥಳದಿಂದ ದೂರಕ್ಕೆ ಓಡಿದ್ದಾರೆ.

ಲಾರಿಯಲ್ಲಿ ಭಾರೀ ಪ್ರಮಾಣದ ಸ್ಫೋಟಕ ಇದೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸುತ್ತಲಿನ ಜನರು ಗುಂಪುಗೂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.  ಪರಿಶೀಲನೆಯ ವೇಳೆ ಇದು ಅಧಿಕೃತ ಪರವಾನಗಿ ಹೊಂದಿದ ಸ್ಫೋಟಕ ಸಾಗಾಟದ ವಾಹನವಾಗಿದ್ದು, ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಸಾಗಿಸಲಾಗುತ್ತಿತ್ತು ಎನ್ನುವುದು ತಿಳಿದು ಬಂದಿದೆ.

ಲಾರಿ ಉಡುಪಿ ಜಿಲ್ಲೆ ಹೆಬ್ರಿಯಿಂದ ಬಂದಿತ್ತು. ಚಿತ್ರದುರ್ಗಕ್ಕೆ ಡಿಟೊನೇಟರ್, ಜಿಲಿಟಿನ್ ಕಡ್ಡಿ ಸರಬರಾಜು ಮಾಡಲು ತೆಗೆದುಕೊಂಡು ಹೋಗುತ್ತಿದ್ದರು. ಪ್ರತಿ ಸ್ಫೋಟಕ ಸಾಮಗ್ರಿಗಳನ್ನೂ ಪ್ರತ್ಯೇಕವಾಗಿ ಇರಿಸಿ ಸುರಕ್ಷಿತವಾಗಿ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಶಾಕಿಂಗ್ ನ್ಯೂಸ್: ಹುಟ್ಟು ಹಬ್ಬದ ಪಾರ್ಟಿಗೆ ಆಗಮಿಸಿದ್ದ ಮಹಿಳಾ ಪೊಲೀಸ್ ಮೇಲೆ ಸಾಮೂಹಿಕ ಅತ್ಯಾಚಾರ

ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ | ಬಿಜೆಪಿ ಸಂಸದನಿಗೂ ಗಾಯ

ತೂಕವನ್ನು ಇಳಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ!

ಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ: ಮಾಲಿಕ ಸಹಿತ ಮೂವರು ಅರೆಸ್ಟ್

“ಮುಂದಿನ ದಿನಗಳಲ್ಲಿ ವಿಧಾನಸಭೆಯ ಸಭಾಂಗಣವನ್ನು ಮದುವೆ, ಮುಂಜಿಗೂ ಬಾಡಿಗೆಗೆ ಕೊಡಬಹುದು”

ಅಸ್ಪೃಶ್ಯತೆ ಜೀವಂತವಿದೆ ಎನ್ನುವುದನ್ನು ಒಪ್ಪಿಕೊಂಡು ಬದಲಾವಣೆಗೆ ಶ್ರಮಿಸಬೇಕು | ಡಿವೈಎಸ್ ಪಿ ರಮೇಶ್

ಇತ್ತೀಚಿನ ಸುದ್ದಿ