ಮುಸ್ಲಿಮರ ವಿರುದ್ಧದ ದ್ವೇಷವನ್ನು ಪ್ರಚೋದಿಸಿದ ಆರೋಪ: ಬೌದ್ಧ ಸನ್ಯಾಸಿಗೆ 4 ವರ್ಷ ಜೈಲುಶಿಕ್ಷೆ - Mahanayaka

ಮುಸ್ಲಿಮರ ವಿರುದ್ಧದ ದ್ವೇಷವನ್ನು ಪ್ರಚೋದಿಸಿದ ಆರೋಪ: ಬೌದ್ಧ ಸನ್ಯಾಸಿಗೆ 4 ವರ್ಷ ಜೈಲುಶಿಕ್ಷೆ

29/03/2024


Provided by

ಮುಸ್ಲಿಮರ ವಿರುದ್ಧದ ದ್ವೇಷವನ್ನು ಪ್ರಚೋದಿಸಿದ ಆರೋಪದಲ್ಲಿ ಶ್ರೀಲಂಕಾದ ಬೌದ್ಧ ಸನ್ಯಾಸಿ ಜ್ಞಾನರಸ ಎಂಬುವವರಿಗೆ ಕೋರ್ಟ್ ನಾಲ್ಕು ವರ್ಷಗಳ ಕಠಿಣ ಸೆರೆವಾಸ ಶಿಕ್ಷೆಯನ್ನು ವಿಧಿಸಿದೆ. ದ್ವೇಷ ಪ್ರಚಾರಕ್ಕೆ ಈತ ಕುಖ್ಯಾತನಾಗಿದ್ದ. 2016ರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈತ ಮುಸ್ಲಿಮರ ವಿರುದ್ಧ ಅತ್ಯಂತ ಪ್ರಚೋದನಕಾರಿಯಾಗಿ ಮಾತಾಡಿದ್ದ.

ಶ್ರೀಲಂಕಾದಲ್ಲಿ 10% ಮುಸ್ಲಿಮರಿದ್ದು ಇವರ ವಿರುದ್ಧ ದಂಗೆಗೆ ಪ್ರಚೋದನೆ ನೀಡಿದ ಆರೋಪವನ್ನು ಇವನ ಮೇಲಿತ್ತು. ಅಲ್ಲದೆ ಮ್ಯಾನ್ಮಾರ್ ನ ಕುಖ್ಯಾತ ಬೌದ್ಧ ಸನ್ಯಾಸಿ ವಿರತ್ತು ಜೊತೆ ಈತನಿಗೆ ಆಪ್ತ ಸಂಬಂಧವಿದೆ. ಜ್ಞಾನರಸನಿಗೆ ಹೀಗೆ ಶಿಕ್ಷೆಯಾಗುತ್ತಿರುವುದು ಇದು ಮೊದಲಲ್ಲ. 2018ರಲ್ಲಿ ಈತನಿಗೆ ಆರು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಆದರೆ ಈತ ಒಂಭತ್ತು ತಿಂಗಳಲ್ಲಿ ಜೈಲ್ ನಿಂದ ಹೊರ ಬಂದಿದ್ದ.

ಆಗಿನ ಅಧ್ಯಕ್ಷ ಮೈತ್ರಿ ಪಾಲ ಸಿರಿಸೇನಾ ಅವರು ಈತನಿಗೆ ಕ್ಷಮಾದಾನ ನೀಡಿದ್ದರು. ಆಗಿನ ಅಧ್ಯಕ್ಷ ಗೊತಬಾಲ ರಾಜಪಕ್ಷ ಅವರು ಈತನಿಗೆ ಇನ್ನಷ್ಟು ದೊಡ್ಡ ಸ್ಥಾನಮಾನ ನೀಡಿದ್ದರು. ಧಾರ್ಮಿಕ ಸೌಹಾರ್ದವನ್ನು ಗಟ್ಟಿಗೊಳಿಸುವುದಕ್ಕಾಗಿ ರೂಪಿಸಲಾದ ಸಮಿತಿಯ ಅಧ್ಯಕ್ಷನನ್ನಾಗಿ ಈತನನ್ನು ನೇಮಕ ಮಾಡಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ