ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ನಾಳೆ ಎಷ್ಟು ಗಂಟೆಗೆ ಪ್ರಕಟವಾಗಲಿದೆ?: ಇಲ್ಲಿದೆ ಮಾಹಿತಿ - Mahanayaka
12:31 AM Tuesday 14 - October 2025

ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ನಾಳೆ ಎಷ್ಟು ಗಂಟೆಗೆ ಪ್ರಕಟವಾಗಲಿದೆ?: ಇಲ್ಲಿದೆ ಮಾಹಿತಿ

sslc exam result
18/05/2022

ಬೆಂಗಳೂರು: ನಾಳೆ ಮಧ್ಯಾಹ್ನ 12:30ಕ್ಕೆ  SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.


Provided by

ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ  ಇವರು, ‘ನಾಳೆ ಮಧ್ಯಾಹ್ನ 12.30ಕ್ಕೆ SSLC ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.

ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‌ ಸೈಟ್‌ನಲ್ಲಿ, ಶಾಲೆಗಳಲ್ಲಿ ಫಲಿತಾಂಶ ಲಭ್ಯವಿರಲಿದೆ. https://karresults.nic.in ಗೆ ಲಾಗಿನ್ ಆಗಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು’

ಈ ಬಾರಿ ರಾಜ್ಯದಲ್ಲಿ 15,387 ಶಾಲೆಗಳಿಂದ ಒಟ್ಟು 8,73,884 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 4,52,732 ವಿದ್ಯಾರ್ಥಿಗಳು, 4,21,110 ವಿದ್ಯಾರ್ಥಿನಿಯರು, ನಾಲ್ವರು ತೃತೀಯ ಲಿಂಗಿ ವಿದ್ಯಾರ್ಥಿಗಳು ಮತ್ತು ವಿಭಿನ್ನ ಸಾಮರ್ಥ್ಯವುಳ್ಳ 5,307 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು

ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ SMS ಮೂಲಕವೂ ಫಲಿತಾಂಶ ಕಳುಹಿಸಲಾಗುತ್ತದೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ’ ಎಂದು ಶಿಕ್ಷಣ ಸಚಿವರು ಶುಭ ಹಾರೈಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಮದ್ರಸಾ ಶಿಕ್ಷಕ ಬಂಧನ

32 ವರ್ಷಗಳ ಜೈಲು ಶಿಕ್ಷೆಯ ಬಳಿಕ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಪೆರಾರಿವಾಲನ್ ಬಿಡುಗಡೆ

ಟೆಸ್ಟ್ ಡ್ರೈವ್ ಮಾಡಿ ಬರುತ್ತೇನೆಂದು ಹೋದವ ಕಾರಿನೊಂದಿಗೆ ಪರಾರಿ!: ಶೋರೂಂ ಸಿಬ್ಬಂದಿ ಕಂಗಾಲು

ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ಬಸ್ ಉಪ್ಪಿನಂಗಡಿ ಬಳಿ ಪಲ್ಟಿ!

ಇತ್ತೀಚಿನ ಸುದ್ದಿ