ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಅಗ್ನಿ ಅವಘಡ | ನಡೆದದ್ದೇನು? - Mahanayaka

ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಅಗ್ನಿ ಅವಘಡ | ನಡೆದದ್ದೇನು?

sslc exam
19/07/2021


Provided by

ಮಂಗಳೂರು: ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದ್ದು, ಶಿಕ್ಷಕರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.  ವಿದ್ಯುತ್ ಶಾರ್ಟ್ ಕಟ್ ನಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ ಸಮೀಪದ ಬಬ್ಬುಕಟ್ಟೆಯಲ್ಲಿನ ಖಾಸಗಿ ಶಾಲೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಲ್ಯಾಬ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಲ್ಯಾಬ್ ಪಕ್ಕದಲ್ಲಿಯೇ  ಎಸೆಸೆಲ್ಸಿ ಪರೀಕ್ಷಾ ಕೊಠಡಿ ಇತ್ತು. ಹೀಗಾಗಿ ಪರೀಕ್ಷಾ ಕೊಠಡಿಗೂ ದಟ್ಟವಾದ ಹೊಗೆ ವ್ಯಾಪಿಸಿದೆ. ಈ ವೇಳೆ ಸ್ಥಳದಲ್ಲಿದ್ದ ಶಿಕ್ಷಕರು ತಕ್ಷಣವೇ ವಿದ್ಯಾರ್ಥಿಗಳನ್ನು ಶಾಲೆಯ ಇನ್ನೊಂದು ಕಟ್ಟಡಕ್ಕೆ ಸ್ಥಳಾಂತರಿಸಿ ಅಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಈ ಮೂಲಕ ಮುಂದಾಗಬಹುದಿದ್ದ ಭಾರೀ ಅನಾಹುತವನ್ನು ಶಿಕ್ಷಕರು ತಪ್ಪಿಸಿದ್ದಾರೆ.

ಘಟನಾ ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಶಿಕ್ಷಕರ ಸಮಯ ಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸುದ್ದಿಗಳು:

2 ಗಂಟೆಗಳಲ್ಲಿ 15 ಮಂದಿಗೆ ಕಚ್ಚಿದ ಹುಚ್ಚುನಾಯಿ | ಬೀದಿ ನಾಯಿಗಳ ಕಾಟದಿಂದ ರೋಸಿ ಹೋದ ಜನರು

ಚಿರತೆಯ ಜೊತೆಗೆ ಹೋರಾಡಿ ತನ್ನ ಮಗಳನ್ನು ರಕ್ಷಿಸಿದ ತಾಯಿ!

ಸೆಲ್ಫಿ ತೆಗೆಯುವ ವೇಳೆ ಭಾರೀ ಆಳದ ಜಲಪಾತಕ್ಕೆ ಬಿದ್ದ ಇನ್ಸ್ ಸ್ಟಾ ಸೆಲೆಬ್ರೆಟಿ

ಪ. ಜಾತಿಯ ಮಕ್ಕಳ ಶಾಲಾ ಪ್ರವೇಶ ಅರ್ಜಿಯ  ಧರ್ಮ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಲು ಮನವಿ

ಇತ್ತೀಚಿನ ಸುದ್ದಿ