ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಗ್ರಾಹಕರಿಗೆ ಸಿಹಿ ಸುದ್ದಿ - Mahanayaka
9:24 AM Wednesday 20 - August 2025

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಗ್ರಾಹಕರಿಗೆ ಸಿಹಿ ಸುದ್ದಿ

19/02/2021


Provided by

ನವದೆಹಲಿ:  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು, ಗೃಹ ನಿರ್ಮಾಣಕ್ಕಾಗಿ ಕಡಿಮೆ ಬಡ್ಡಿ ಸಾಲವನ್ನ ನೀಡುವುದರ  ಜೊತೆಗೆ ಸಾಲದ ಮೇಲಿನ ಸಂಸ್ಕರಣಾ ಶುಲ್ಕ ಮನ್ನಾ ಮಾಡಲಾಗುವುದು ಎಂದು ತಿಳಿಸಿದೆ.

ಸಾಲದ ಮೇಲಿನ ಸಂಸ್ಕರಣಾ ಶುಲ್ಕವನ್ನ ಮನ್ನಾ ಮಾಡುವುದಾಗಿ ಬ್ಯಾಂಕ್ ಹೇಳಿದ್ದು, ಇದರಿಂದ ಸಾಲಗಾರರಿಗೆ ಸ್ವಲ್ಪ ನೆಮ್ಮದಿಯನ್ನು ನೀಡಲಿದೆ. ಆದರೆ ಇದು ಗೃಹ ಸಾಲ ಪಡೆದುಕೊಂಡ ಗ್ರಾಹಕರಿಗೆ ಮಾತ್ರವೇ ಅನ್ವಯವಾಗುತ್ತದೆ ಎಂದು ತಿಳಿಸಿದೆ.

ಗೃಹ ಸಾಲ ತೆಗೆದುಕೊಳ್ಳುವವರು ಮಾರ್ಚ್ 31ರವರೆಗೆ ಯಾವುದೇ ಸಂಸ್ಕರಣಾ ಶುಲ್ಕವನ್ನ ಪಾವತಿಸಬೇಕಾಗಿಲ್ಲ. ಇದಲ್ಲದೇ ಅಗ್ಗದ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು ಎಂದು ಬಹಿರಂಗ ಪಡಿಸಿದೆ.

ಇತ್ತೀಚಿನ ಸುದ್ದಿ