ರಾಜ್ಯಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆ:  ಮರಿಯಂ ನಿಕೇತನ ಶಾಲಾ ವಿದ್ಯಾರ್ಥಿ ಇಸ್ಮಾಯಿಲ್ ಮರ್ಝೂಕ್ ಗೆ ಚಿನ್ನದ ಪದಕ - Mahanayaka

ರಾಜ್ಯಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆ:  ಮರಿಯಂ ನಿಕೇತನ ಶಾಲಾ ವಿದ್ಯಾರ್ಥಿ ಇಸ್ಮಾಯಿಲ್ ಮರ್ಝೂಕ್ ಗೆ ಚಿನ್ನದ ಪದಕ

ismail marzook
01/12/2025

ಮೂಡುಬಿದಿರೆ: ಕರ್ನಾಟಕದ ಸ್ಕ್ವೇಯ್ ಸಂಸ್ಥೆ ರವಿವಾರ ಗದಗ ಜಿಲ್ಲೆಯಲ್ಲಿ ಆಯೋಜಿಸಿದ ರಾಜ್ಯಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಬೆಳುವಾಯಿಯ ಮರಿಯಂ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಇಸ್ಮಾಯಿಲ್ ಮರ್ಝೂಕ್ 18 ವರ್ಷ ವಯೋಮಿತಿಯ 48 ಕೆ.ಜಿ.  ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿ ಬಂಗಾರದ ಪದಕ ಪಡೆಡಿದ್ದಾರೆ.

ಅಲ್ಲದೆ, ಇಸ್ಮಾಯಿಲ್ ಮರ್ಝೂಕ್  ಜ. 4 ರಿಂದ 7 ರವರೆಗೆ ಹೈದರಾಬಾದ್ ನ ಗಚಿಬಹುಲಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ನಲ್ಲಿ ರಾಜ್ಯದಿಂದ ಪ್ರತಿನಿಧಿಸಲಿದ್ದಾರೆ. ಇವರು ಮೊಹಮ್ಮದ್ ನದೀಮ್ ಹಾಗೂ ಸಫ್ರಾಜ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

ನಮ್ಮ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತ ನಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಈಗ ಮಾರ್ಸಲ್ ಆರ್ಟ್ಸ್ ನಲ್ಲೂ ತಮ್ಮ ಪ್ರತಿಭೆ ತೋರಿಸಿ ರಾಜ್ಯ ಮಟ್ಟದಲ್ಲಿ ಬೆಳಗುತ್ತಿರುವುದು ಬಹಳವೇ ಖುಷಿಕೊಟ್ಟಿದೆ. ಹೀಗೆಯೇ ನಮ್ಮ ವಿದ್ಯಾರ್ಥಿಗಳು ಎಲ್ಲೆಡೆ ಸಾಧಿಸುವಂತಾಗಲಿ ಎಂದು ಮರಿಯಂ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತಾ ಲಸ್ರಾದೋ ಹಾರೈಸಿ, ಅಭಿನಂದನೆ ಸಲ್ಲಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ