ಒಬ್ಬರ ಧರ್ಮವು ಅವರವರ ಮನೆಗಳೊಳಗೆ ಇರಬೇಕು, ಪೂಜಾ ಸ್ಥಳಕ್ಕೆ ಸೀಮಿತವಾಗಬೇಕು: ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ಬಾವನ ಹೇಳಿಕೆ - Mahanayaka
10:33 AM Saturday 23 - August 2025

ಒಬ್ಬರ ಧರ್ಮವು ಅವರವರ ಮನೆಗಳೊಳಗೆ ಇರಬೇಕು, ಪೂಜಾ ಸ್ಥಳಕ್ಕೆ ಸೀಮಿತವಾಗಬೇಕು: ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ಬಾವನ ಹೇಳಿಕೆ

pradeep
24/04/2025


Provided by

Pahalgam Terror Attack– ಬೆಂಗಳೂರು: ಧರ್ಮದ ಹೆಸರಿನಲ್ಲಿ ಮುಸ್ಲಿಮೇತರರ ಮೇಲೆ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಏಜೆಂಟ್ ಮಂಜುನಾಥ್ ರಾವ್ ಬಲಿಯಾಗಿದ್ದಾರೆ. ಈ ಘಟನೆಯ ನಂತರ ಮಂಜುನಾಥ್ ಅವರ ಕುಟುಂಬ ತಮ್ಮ ನೋವಿನ ನಡುವೆಯೂ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ.

ಮೃತ ಮಂಜುನಾಥ್ ಅವರು ಭಾವ ಪ್ರದೀಪ್ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ, ಒಬ್ಬರ ಧರ್ಮವು ಅವರವರ ಮನೆಗಳೊಳಗೆ ಇರಬೇಕು ಮತ್ತು ಪೂಜಾ ಸ್ಥಳಗಳಿಗೆ ಸೀಮಿತವಾಗಿರಬೇಕು. ಅದನ್ನು ಮೀರಿ ವಿಸ್ತರಿಸಿ ಹೋಗಬಾರದು ಎಂದು ಹೇಳಿದ್ದಾರೆ.

ಧರ್ಮದ ಹೆಸರಿನಲ್ಲಿ ಮುಸ್ಲಿಮೇತರರ ಮೇಲೆ ಪಹಲ್ಗಾಮ್ ನಲ್ಲಿ ನಡೆದ ದಾಳಿಯನ್ನು ಖಂಡಿಸಿರುವ ಅವರು, ಸರ್ಕಾರವು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗುರುವಾರ ಮುಂಜಾನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಜುನಾಥ್ ರಾವ್ ಅವರ ಮೃತದೇಹವನ್ನು ಸ್ವೀಕರಿಸಲು, ಅವರ ಸಹೋದರಿ ಪಲ್ಲವಿ ಮತ್ತು 18 ವರ್ಷದ ಸೋದರಳಿಯ ಅಭಿಜಯ ಅವರನ್ನು ಭೇಟಿ ಮಾಡಲು ಕಾಯುತ್ತಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಧರ್ಮವು ವೈಯಕ್ತಿಕ ವಿಷಯ. ಅದು ಒಬ್ಬರ ಮನೆ ಅಥವಾ ಪೂಜಾ ಸ್ಥಳಗಳ ನಾಲ್ಕು ಗೋಡೆಗಳ ಒಳಗೆ ಇರಬೇಕು. ಅದನ್ನು ಎಂದಿಗೂ ಭಯೋತ್ಪಾದನೆ ಅಥವಾ ಹಿಂಸಾಚಾರದ ಮೂಲಕ ಇತರರ ಮೇಲೆ ಹೇರಬಾರದು ಎಂದು ಅವರು ಹೇಳಿದ್ದಾರೆ.

ನನ್ನ ಸೋದರಳಿಯ 12ನೇ ತರಗತಿ ಪರೀಕ್ಷೆ ಮುಗಿಸಿ ಉತ್ತಮ ಫಲಿತಾಂಶ ಬಂದ ಖುಷಿಯಲ್ಲಿ ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದರು. ಈ ವೇಳೆ ತನ್ನ ತಂದೆಯನ್ನು ತನ್ನ ಕಣ್ಣ ಮುಂದೆಯೇ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದನ್ನು ನೋಡಿದ ಭಯಾನಕ ಘಟನೆಯನ್ನು ಅವನು ಹೇಗೆ ಮರೆಯಲು ಸಾಧ್ಯ ಎಂದು ಪ್ರದೀಪ್ ಪ್ರಶ್ನಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ