ಚಿಕ್ಕಮಗಳೂರು ನಗರದ ಹಲವೆಡೆ ಬೀದಿನಾಯಿ ದಾಳಿ: 11 ಜನರಿಗೆ ಗಾಯ

ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಹಲವೆಡೆ ಬೀದಿನಾಯಿಗಳ ದಾಳಿಗೆ ಜನರು ಕಂಗೆಟ್ಟ ಘಟನೆ ನಗರದ ಹೌಸಿಂಗ್ ಬೋರ್ಡ್, ಜಿಲ್ಲಾ ಪಂಚಾಯ್ತಿ ಸುತ್ತಮುತ್ತ ನಡೆದಿದೆ.
ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಮೇಲೆ ಬೀದಿ ನಾಯಿಗಳು ದಾಳಿಮಾಡಿವೆ. ನಾಯಿ ದಾಳಿಯಿಂದ ಗಾಯಗೊಂಡವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ 11 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ.
ಗಾಯಗೊಂಡವರ ಪೈಕಿ 7 ಜನ ಅಡ್ಮಿಟ್ ಆಗಿದ್ದಾರೆ. 4 ಜನರಿಗೆ ಚಿಕಿತ್ಸೆ ನೀಡಿ ವೈದ್ಯರು ಕಳುಹಿಸಿದ್ದಾರೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD