ಬಸ್ ಇಲ್ಲ ಎಂದು ರಸ್ತೆಗೆ ಇಳಿದು ವಿದ್ಯಾರ್ಥಿಗಳಿಂದ ಧರಣಿ: ಜನಪ್ರತಿನಿಧಿಗಳೇ ಹೇಗಿದೆ ಗೊತ್ತಾ ಇಲ್ಲಿನ ಪರಿಸ್ಥಿತಿ!? - Mahanayaka

ಬಸ್ ಇಲ್ಲ ಎಂದು ರಸ್ತೆಗೆ ಇಳಿದು ವಿದ್ಯಾರ್ಥಿಗಳಿಂದ ಧರಣಿ: ಜನಪ್ರತಿನಿಧಿಗಳೇ ಹೇಗಿದೆ ಗೊತ್ತಾ ಇಲ್ಲಿನ ಪರಿಸ್ಥಿತಿ!?

hanuru
20/01/2023

ಚಾಮರಾಜನಗರ: ಸರಿಯಾಗಿ ಬಸ್ ಗಳು ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ರಸ್ತೆಗೆ ಬಂದು ಪ್ರತಿಭಟಿಸುವಂತ ದುಸ್ಥಿತಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹತ್ತಾರು ಕಾಡಂಚಿನ ಗ್ರಾಮದ ಮಕ್ಕಳದ್ದಾಗಿದೆ.

ಗ್ರಾಮಕ್ಕೆ ಪ್ರತಿ ದಿನ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ, ಒಂದು ವೇಳೆ ಬಸ್ ಬಾರದೇ ಇದ್ದರೆ, ಕಾಡು ದಾರಿಯಲ್ಲಿ 5 ರಿಂದ 8 ಕಿ.ಮೀ. ವರೆಗೆ ವಿದ್ಯಾರ್ಥಿಗಳು ನಡೆದುಕೊಂಡು ಹೋಗಬೇಕಾ ದುಸ್ಥಿತಿ ಇಲ್ಲಿದೆ.

ಪ್ರತೀ ದಿನ ಮಕ್ಕಳು ಶಾಲೆಯಿಂದ ಮನೆಗೆ ಬರುವವರೆಗೂ ಜೀವವನ್ನು ಕೈಯಲ್ಲಿ ಹಿಡಿದು ಕಾಯುವಂತಹ ಪರಿಸ್ಥಿತಿಯಲ್ಲಿ ಪೋಷಕರಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಪೋಷಕರು ಕೆಲಸಕ್ಕೆ ತೆರಳಿದರೂ, ಶಾಲಾ ಸಮಯದಲ್ಲಿ ಮಕ್ಕಳು ಮನೆಗೆ ಹೇಗೆ ಸೇರಿದ್ದಾರೆ ಅನ್ನೋ ಆತಂಕದಲ್ಲೇ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಒಂದು ವೇಳೆ ಬಸ್ ಬಾರದೇ ಇದ್ದರೆ, ವಿದ್ಯಾರ್ಥಿಗಳು ಶಾಲೆಗೆ ರಜೆ ಹಾಕುವುದು ಅನಿವಾರ್ಯವಾಗಿದೆ. ಇದು ಹನೂರು ತಾಲ್ಲೂಕಿನ ಹತ್ತಾರು ಕಾಡಂಚಿನ ಗ್ರಾಮದ ದುಸ್ಥಿತಿಯಾಗಿದೆ.

ಸಾಕಷ್ಟು ವರ್ಷಗಳಿಂದ ಈ ಕಷ್ಟವನ್ನು ಅನುಭವಿಸುತ್ತಿರುವ ವಿದ್ಯಾರ್ಥಿಗಳು  ಇಂದು ಬಸ್ ಗಾಗಿ ಕಾದು ಕುಳಿತು ರಸ್ತೆಯಲ್ಲೇ ಧರಣಿ ನಡೆಸಿದ್ದಾರೆ.  ಇವರಿಗೆ ಸಾರ್ವಜನಿಕರು, ಕನ್ನಡಪರ ಸಂಘಟನೆಗಳು ಸಾಥ್ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ